ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ವಿಶೇಷ ಚೇತನರಿಗೆ ಹೊಲಿಗೆ ಯಂತ್ರ ಹಸ್ತಾಂತರ

ಮಂಗಳೂರು:ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಸುರತ್ಕಲ್ ಪತಂಜಲಿ ಉತ್ಪನ್ನಗಳ ಮಳಿಗೆ ಸಹಯೋಗದಿಂದ ಸುರತ್ಕಲ್ಲಿನ ಪತಂಜಲಿ ಉತ್ಪನ್ನಗಳ ಮಳಿಗೆಯಲ್ಲಿ ಸಕ್ಷಮ ದಿಂದ ಗುರುತಿಸಲ್ಪಟ್ಟ ವಿಶೇಷ ಚೇತನರಾದ ವಿಕ್ರಂ ರವರಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ನೆರವೇರಿತು.

ಪತಂಜಲಿ ಮಳಿಗೆಯ ಮಾಲಕ ರಮೇಶ್ ಅಂಚನ್ ರವರು ಸುಮಾರು ಹನ್ನೆರಡು ಸಾವಿರ ರೂಪಾಯಿ ಮೊತ್ತದ ಹೊಲಿಗೆ ಯಂತ್ರದ ಧನಸಹಾಯವನ್ನು ನೀಡಿ ವಿಶೇಷಚೇತನ ರಾಗಿರುವ ವಿಕ್ರಮ್ ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುರತ್ಕಲ್ ಸಂಘ ಚಾಲಕ ಕೃಷ್ಣಮೂರ್ತಿ ಭಾಗವಹಿಸಿ ಶುಭ ಹಾರೈಸಿದರು.

ಸಕ್ಷಮ ಕರ್ನಾಟಕದ ಕೋಶಾಧಿಕಾರಿ ಜಯದೇವ ಕಾಮತ್, ದಕ ಜಿಲ್ಲಾ ಘಟಕದ ಉಪಾಧ್ಯಕ್ಷ ಕೃಷ್ಣ ಪೂಜಾರಿ, ಕಾರ್ಯದರ್ಶಿ ಹರೀಶ್ ಪ್ರಭು, ಪದಾಧಿಕಾರಿಗಳಾದ ರಾಜಶೇಖರ್ ಭಟ್ ಕಾಕುಂಜೆ, ಮತ್ತು ಅನುಷ ಭಟ್ ಉಪಸ್ಥಿತರಿದ್ದರು.

ಸಕ್ಷಮ ಕರ್ನಾಟಕದ ಜಯದೇವ ಕಾಮತ್ ರವರು ಸಕ್ಷಮದ ಧ್ಯೇಯ ಮತ್ತು ಉದ್ದೇಶಗಳ ಬಗ್ಗೆ ವಿವರಿಸಿ ಧನ್ಯವಾದಗಳನ್ನು ಸಮರ್ಪಿಸಿದರು.

Edited By : PublicNext Desk
Kshetra Samachara

Kshetra Samachara

05/11/2021 07:41 am

Cinque Terre

1.66 K

Cinque Terre

0

ಸಂಬಂಧಿತ ಸುದ್ದಿ