ಮುಲ್ಕಿ:ಕಿನ್ನಿಗೋಳಿ ಚರ್ಚ್ ಧರ್ಮಗುರುಗಳಾಗಿ ಉತ್ತಮ ಸೇವೆ ಸಲ್ಲಿಸಿದ ಪಾದರ್ ಮ್ಯಾಥ್ಯೂ ವಾಸ್ ಉತ್ತಮ ವ್ಯಕ್ತಿತ್ವದ ಮೂಲಕ ಜನಾನುರಾಗಿಯಾಗಿದ್ದರು ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು
ಅವರು ಕಿನ್ನಿಗೋಳಿ ಚರ್ಚ್ ಗೆ ಭೇಟಿ ನೀಡಿ ಇತ್ತಿಚೆಗೆ ನಿಧನರಾದ ಕಿನ್ನಿಗೋಳಿ ಚರ್ಚ್ ಧರ್ಮಗುರುಗಳ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಈ ಸಂದರ್ಭ ಮಂಡಲಾಧ್ಯಕ್ಷ ಸುನೀಲ್ ಅಳ್ವ, ಕಾರ್ಯದರ್ಶಿ ಕೇಶವ ಕರ್ಕೇರ, ಭುವನಾಭಿರಾಮ ಉಡುಪ, ಈಶ್ವರ್ ಕಟೀಲ್, ಧರ್ಮಗುಗರುಗಳಾದ ವಿಲಿಯಂ ಡಿಸೋಜ, ಚರ್ಚ್ ಪಾಲನಾಮಂಡಳಿ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ, ಕಾರ್ಯದರ್ಶಿ ವಿನ್ಸೆಂಟ್ ಮಥಯಿಸ್, ಐ.ಸಿ.ವೈ.ಎಂ ಅಧ್ಯಕ್ಷ ಆಲ್ಡ್ರಿನ್ ಡಿಸೋಜ, ಲ. ಸ್ಯಾನಿ ಪಿಂಟೋ ಕಟೀಲ್ ಮತ್ತಿತರು ಉಪಸ್ಥಿತರಿದ್ದರು.
Kshetra Samachara
25/10/2021 04:01 pm