ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಪ್ರಾಮಾಣಿಕತೆ ಮೆರೆದ ಪೊಲೀಸ್ ಸಿಬ್ಬಂದಿ

ಕಡಬ: ತಮಗೆ ಸಿಕ್ಕಿದ್ದ ಎರಡು ಚಿನ್ನದ ಉಂಗುರಗಳನ್ನು ಅವುಗಳ ವಾರಸುದಾರರಿಗೆ ಹಿಂತಿರುಗಿಸಿ ಪೊಲೀಸ್‌ ಪೇದೆಯೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ಕುಂತೂರಿನಲ್ಲಿ ನಡೆದಿದೆ.

ಕಡಬ ಠಾಣಾ ಪೊಲೀಸ್ ಪೇದೆ ಗೋವಿಂದರಾಜು ಅವರು ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಕುಂತೂರು ಹಿರಿಯ ಪ್ರಾಥಮಿಕ ಶಾಲೆಯ ಕುಂತೂರು ಪದವು ಎಂಬಲ್ಲಿ ನಿಯೋಜನೆಗೊಂಡಿದ್ದರು. ಈ ವೇಳೆ ಶಾಲಾ ಆವರಣದಲ್ಲಿ ಎರಡು ಚಿನ್ನದ ಉಂಗುರಗಳು ಗೋವಿಂದರಾಜು ಅವರಿಗೆ ಸಿಕ್ಕಿವೆ. ಬಳಿಕ ಅವುಗಳನ್ನು ಕಡಬ ಠಾಣೆಗೆ ತಂದು ಒಪ್ಪಿಸಿದ್ದರು.

ಉಂಗುರಗಳು ಕುಂತೂರಿನ ಬಾಬುಗೌಡ ಎಂಬವರ ಪುತ್ರ ಸನತ್ ಎಂಬವರಿಗೆ ಸೇರಿದ್ದೆಂದು ಖಚಿತಪಡಿಸಿಕೊಂಡು ವಾರಸುದಾರರನ್ನು ಠಾಣೆಗೆ ಕರೆಸಿ ಮೇಲಾಧಿಕಾರಿಗಳ ಆದೇಶದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಹಸ್ತಾಂತರಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

28/12/2020 11:04 pm

Cinque Terre

10.91 K

Cinque Terre

1

ಸಂಬಂಧಿತ ಸುದ್ದಿ