ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪನ್ಯಾಸಕಿ ಸಫಿಯಾ ಅವರಿಗೆ ಮಂಗಳೂರು ವಿವಿಯಿಂದ ಪಿಎಚ್ ಡಿ ಗೌರವ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕಿ ಸಫಿಯಾ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಇಂಪ್ಯಾಕ್ಟ್‌ ಆಫ್‌ ಸೋಷಿಯಲ್‌ ನೆಟ್‌ವರ್ಕಿಂಗ್‌ ಸೈಟ್ಸ್‌ ಅಮಾಂಗ್‌ ಮೀಡಿಯಾ ಪ್ರೊಫೆಶನಲ್ಸ್‌ ಇನ್‌ ಕರ್ನಾಟಕ ('ಕರ್ನಾಟಕದ ಮಾಧ್ಯಮ ವೃತ್ತಿಪರರಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ') ಎಂಬ ವಿಷಯದಲ್ಲಿ ಸಫಿಯಾ ಸಂಶೋಧನೆ ನಡೆಸಿದ್ದರು.

ಈ ಸಂಶೋಧನೆಯನ್ನು ಅಂಗೀಕರಿಸಿರುವ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.

ಪತ್ರಿಕೋದ್ಯಮ ವಿಭಾಗದ ನಿವೃತ್ತ ಉಪನ್ಯಾಸಕಿ ಪ್ರೊ. ವಹೀದಾ ಸುಲ್ತಾನಾ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧ ಮಂಡಿಸಿದ್ದಾರೆ.

ಸಫಿಯಾ ಅವರು ದಿವಂಗತ ಎಂ.ಅಬ್ದುಲ್ ಹಮೀದ್ ವೇಣೂರು ಮತ್ತು ರಾಬಿಯಮ್ಮ ಅವರ ಪುತ್ರಿಯಾಗಿದ್ದು, ಆನ್‌ಲೈನ್ ಮಾಧ್ಯಮವೊಂದರ ಸಂಪಾದಕ ನಈಮ್ ಸಿದ್ದೀಖಿಯವರ ಪತ್ನಿಯಾಗಿದ್ದಾರೆ.

Edited By :
Kshetra Samachara

Kshetra Samachara

18/09/2020 12:37 pm

Cinque Terre

6.48 K

Cinque Terre

0

ಸಂಬಂಧಿತ ಸುದ್ದಿ