ಮಂಗಳೂರು: ಕಟೀಲು 5ನೇ ಮೇಳದ ಪ್ರಧಾನ ಭಾಗವತ ಪದ್ಯಾಣ ಗೋವಿಂದ ಭಟ್ ಅವರು "ಶ್ರೀ ಕದ್ರಿ" ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಡಿ.27ರಂದು ಸಂಜೆ ಕದ್ರಿ ದೇವಸ್ಥಾನ ಬಳಿಯ ಮಂಜುನಾಥ ಕಾಲೊನಿಯ ಶ್ರೀ ಕದ್ರಿ ಪ್ರಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಗಣ್ಯರ ಸಮ್ಮುಖ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಯೋಜಕ ಕುಂಜತ್ತೋಡಿ ವಾಸುದೇವ ಭಟ್ ಕದ್ರಿ ತಿಳಿಸಿದ್ದಾರೆ.
ಪದ್ಯಾಣ ಗಣಪತಿ ಭಟ್- ಅದಿತಿ ಅಮ್ಮ ದಂಪತಿ ಪುತ್ರ 51 ವರ್ಷದ ಗೋವಿಂದ ಭಟ್ಟರು ಬಿ.ಕಾಂ. ಪದವೀಧರ. 29 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆ ಮಾಡುತ್ತಿದ್ದು, ಕಳೆದ 6 ವರ್ಷಗಳಿಂದ ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದಾರೆ.
Kshetra Samachara
24/12/2020 08:37 pm