ಮುಲ್ಕಿ: ಕ್ರಿಸ್ಮಸ್ ಹಬ್ಬ ಮತ್ತೆ ಬಂದಿದೆ. ಹಬ್ಬದ ಸಡಗರ ಕೂಡ ಕಾಣಿಸಿಕೊಂಡಿದೆ.
ಕ್ರಿಸ್ಮಸ್ ಟ್ರೀ ಸೇರಿದಂತೆ ಅಲಂಕಾರಿಕ ವಸ್ತುಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಆದರೆ, ಪಕ್ಷಿಕೆರೆಯ ನಿತಿನ್ ವಾಸ್ ಬಳಕೆಯಾದ ಪತ್ರಿಕೆಯ ರದ್ದಿ ಕಾಗದಗಳಿಂದ ಸುಂದರವಾದ ಕ್ರಿಸ್ಮಸ್ ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸಿದ್ದಾರೆ. ಮರೆಯಾಗುತ್ತಿರುವ ಕ್ರಿಸ್ಮಸ್ ಗ್ರೀಟಿಂಗ್ಸ್ ಗಳನ್ನು ಕೂಡ ಪತ್ರಿಕೆಗಳ ರದ್ದಿನಿಂದ ತಯಾರಿಸಿ ಅದರೊಳಗೆ ತರಕಾರಿ ಬೀಜ ಇಟ್ಟು ನೀಡುವ ಕಾರ್ಯ ಮಾಡುತ್ತಿದ್ದಾರೆ.
ಒಟ್ಟಾರೆ ಪರಿಸರ ಪೂರಕ ಕ್ರಿಸ್ಮಸ್ ಆಚರಣೆ ಈ ಬಾರಿ ನಡೆಯಲಿ ಎನ್ನುವುದು ನಿತಿನ್ ವಾಸ್ ಅವರ ಆಶಯ.
Kshetra Samachara
24/12/2020 03:34 pm