ಮೂಡುಬಿದಿರೆ: ಅರಣ್ಯ ಇಲಾಖೆ ಸಂಚಾರಿ ದಳದ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ನಿವೃತ್ತಿಗೊಂಡ ಎಂ. ರಾಮ ಗೌಡ ಮಿಜಾರು (84) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ಕರ್ನಾಟಕ ರಾಜ್ಯ ಕುಡುಬಿ ಸಂಘದ ಅಧ್ಯಕ್ಷರಾಗಿ 15 ವರ್ಷ ಹಾಗೂ ದ.ಕ. ಜಿಲ್ಲಾ ಕುಡುಬಿ ಸಂಘದಲ್ಲಿ 40 ವರ್ಷಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸಂಘವನ್ನು ಮುನ್ನಡೆಸಿದ್ದರು.
Kshetra Samachara
18/12/2020 06:14 pm