ಮುಲ್ಕಿ: ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ ನೇತೃತ್ವದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪಡುಪಣಂಬೂರು ಗ್ರಾಪಂ ಸಂಯುಕ್ತ ಆಶ್ರಯದಲ್ಲಿ 10ನೇ ತೋಕೂರು ಗ್ರಾಮದ ಕಂಬಳಬೆಟ್ಟುವಿನ ಪರಂಬೋಕು ತೋಡಿನ ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಸೇವಾ ಕಾರ್ಯ ನಡೆಯಿತು.
ಈ ಸಂದರ್ಭ ಪಡುಪಣಂಬೂರು ಗ್ರಾಪಂ ಮಾಜಿ ಸದಸ್ಯ ಹೇಮನಾಥ್ ಅಮೀನ್ ಮಾತನಾಡಿ, ಅಣೆಕಟ್ಟೆಗೆ ಹಲಗೆ ಹಾಕುವ ಮೂಲಕ ಅಂತರ್ಜಲ ಮಟ್ಟ ರಕ್ಷಿಸುವ ಕಾರ್ಯ ಶ್ಲಾಘನೀಯ ಎಂದರು.
ಶ್ರಮದಾನದಲ್ಲಿ ಪಂ. ಕಾರ್ಯದರ್ಶಿ ಲೋಕನಾಥ್, ಗ್ರಾಮಸ್ಥರು ಉಪಸ್ಥಿತರಿದ್ದರು. ಮಂಡಳಿ ಅಧ್ಯಕ್ಷ ಯಜ್ಞೆಶ್ ಪಿ. ಶೆಟ್ಟಿಗಾರ್, ಕಾರ್ಯದರ್ಶಿ ಧನು ಅಂಚನ್ ಹಾಗೂ ಸದಸ್ಯರು ಭಾಗವಹಿಸಿದರು.
Kshetra Samachara
06/12/2020 04:24 pm