ಮಂಗಳೂರು: ಕ್ಯಾನ್ಸರ್ ಪೀಡಿತ ಮಹಿಳೆಯರಿಗಾಗಿ 20 ವರ್ಷದ ಯುವತಿಯೊಬ್ಬರು ತನ್ನ ಕೂದಲನ್ನು ದಾನ ಮಾಡಿದ್ದಾರೆ.
ದೇಲಂಪಾಡಿ ಮೂಲದ ಪ್ರಶಾಂತಿ ವಣಿಯಾನ್ ಸಂಬಂಧಿಕರೊಬ್ಬರು ಕೂದಲು ದಾನ ಮಾಡಿದ್ದರು. ಅವರಿಂದ ಪ್ರೇರಿಪಿತಗೊಂಡ ಪ್ರಶಾಂತಿ ತಮ್ಮ 14 ಇಂಚು ಉದ್ದದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾರೆ. ಪುತ್ತೂರಿನ ದರ್ಬೆಯಲ್ಲಿನ ಸೈಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಯಾಗಿರುವ ಪ್ರಶಾಂತಿ ತನ್ನ ಕೂದಲನ್ನು ತ್ರಿಶೂರ್‌ನ ಮಿರಾಕಲ್ ಚಾರಿಟೇಬಲ್ ಅಸೋಸಿಯೇಷನ್‌ನ ಹೇರ್ ಬ್ಯಾಂಕ್‌ಗೆ ಶಿಫಾರಸು ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರಶಾಂತಿ, 'ಪ್ರತಿ ವರ್ಷ ನಾನು ನನ್ನ ಕೂದಲಿನ ಒಂದು ಇಂಚು ಕತ್ತರಿಸಿ ಎಸೆಯುತ್ತಿದ್ದೆ. ಆದರೆ ಈ ವರ್ಷ ಒಳ್ಳೆಯ ಬದಲಾವಣೆಗಾಗಿ ಒಂದು ಇಂಚು ಕತ್ತರಿಸುವ ಬದಲು ನನ್ನ ಕೂದಲಿನ 14 ಇಂಚುಗಳನ್ನು ಕತ್ತರಿಸಿ ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿದ್ದೇನೆ. ನನ್ನ ಕೂದಲನ್ನು ದಾನ ಮಾಡಿದ್ದಕ್ಕಾಗಿ ನನ್ನ ಬಗ್ಗೆ ಹೆಮ್ಮೆ ಇದೆ. ಕ್ಯಾನ್ಸರ್ ರೋಗಿಗಳಿಗೆ ಹಾಗೂ ಅವರ ಮುಖದಲ್ಲಿ ಮಂದಹಾಸವನ್ನು ತರುವ ಈ ನನ್ನ ತೀರ್ಮಾನ ನನಗೆ ಸಂತಸವನ್ನುಂಟು ಮಾಡಿದೆ' ಎಂದು ಹೇಳಿದ್ದಾರೆ.
Kshetra Samachara
17/10/2020 07:49 am