ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಎನ್ ಐಟಿಕೆ ಟೋಲ್ ತೆರವು "ಸಾಮಾಜಿಕ ಜಾಲತಾಣದಲ್ಲಿ ಹೋರಾಟದ ಕಿಚ್ಚು"

ಸುರತ್ಕಲ್: ಸುರತ್ಕಲ್ ಸಮೀಪದ ಎನ್ ಐಟಿಕೆ ಅಕ್ರಮ ಟೋಲ್ ಧ್ವನಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದು ಟೋಲ್ ತೆರವಿಗೆ ಮತ್ತೆ ಹೋರಾಟ ಪ್ರಾರಂಭಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ."60 ಕಿ.ಮೀ ಒಳಗಡೆ ಇರುವ ಅಕ್ರಮ ಟೋಲ್ ಗೇಟ್ ಗಳನ್ನು 90 ದಿನಗಳಲ್ಲಿ ತೆರವುಗೊಳಿಸಲಾಗುವುದು" ಎಂದು ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ಉಡುಪಿ ಜಿಲ್ಲೆಯ "ಹೆಜಮಾಡಿ ಯಿಂದ ಸುರತ್ಕಲ್ ಪಾದಯಾತ್ರೆ" ನಡೆದ ಮಾರ್ಚ್ 22 ರಂದು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಅಧಿಕೃತ ಹೇಳಿಕೆ ನೀಡಿದ್ದರು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಇದನ್ನೇ ಪುನರುಚ್ಚರಿಸಿದರು. ಈಗ 78 ದಿನಗಳು ಮುಗಿದಿವೆ. ಜೂನ್ 22 ಕ್ಕೆ 90 ದಿನಗಳು ಭರ್ತಿ ಯಾಗಲಿದೆ. ಈಗ ನಾವು ಕೇಳುತ್ತಿದ್ದೇವೆ."ಮಿಸ್ಟರ್ ನಳಿನ್ ಕುಮಾರ್ ಕಟೀಲ್ ಹಾಗೂ ಭರತ್ ಶೆಟ್ಟಯವರೆ, ಜೂನ್ 22 ರಂದು ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳ್ಳುತ್ತದೆ ತಾನೆ ?"

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಗಳು ಫಾರ್ವರ್ಡ್ ಆಗುತ್ತಿದ್ದು ಮತ್ತೆ ಟೋಲ್ ವಿರೋಧಿ ಹೋರಾಟದ ಕಿಚ್ಚು ಬುಗಿಲೇಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಇದಕ್ಕೆ ಸಂಸದರು ಹಾಗೂ ಶಾಸಕರ ಪ್ರತಿಕ್ರಿಯೆ ಇನ್ನಷ್ಟೇ ತಿಳಿಯಬೇಕಾಗಿದೆ.

Edited By : Nirmala Aralikatti
Kshetra Samachara

Kshetra Samachara

09/06/2022 07:46 pm

Cinque Terre

31.01 K

Cinque Terre

1

ಸಂಬಂಧಿತ ಸುದ್ದಿ