ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಆಂಬ್ಯುಲೆನ್ಸ್ ನಲ್ಲಿಯೇ 2,700 ಕಿ.ಮೀ. ದೂರದ ಉತ್ತರಪ್ರದೇಶಕ್ಕೆ ರೋಗಿಯ ಲಿಫ್ಟ್

ಮಂಗಳೂರು: ರೋಗಿಗಳನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಸಾಗಿಸೋದು ಮಾಮೂಲಿ. ಆದರೆ ಮೂಡುಬಿದಿರೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯನ್ನು ಉತ್ತರಪ್ರದೇಶ ರಾಜ್ಯಕ್ಕೆ ಬರೋಬ್ಬರಿ 2,700 ಕಿ.ಮೀ. ದೂರ ಆಂಬ್ಯುಲೆನ್ಸ್ ನಲ್ಲಿಯೇ ಸಾಗಾಟ ಮಾಡಿರುವ ಪ್ರಸಂಗವೊಂದು ನಡೆದಿದೆ.

ಉತ್ತರ ಪ್ರದೇಶ ಮೂಲದ ಮಹಾಂದಿ ಹಸ್ಸನ್ ಎಂಬುವರು ಮೂಡಬಿದಿರೆಯ ಮಾಸ್ತಿಕಟ್ಟೆಯ ಅಡಿಕೆ ಗೋದಾಮಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಬಿದ್ದು ತೀವ್ರವಾಗಿ ಗಾಯಗೊಂಡು ಮೂಡಬಿದಿರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರೋಗಿಯ ಕುಟುಂಬಸ್ಥರು ಉತ್ತರ ಪ್ರದೇಶದ ಮೊರದಾಬಾದ್​ನಲ್ಲಿ ಚಿಕಿತ್ಸೆ ಕೊಡಿಸಲು ನಿರ್ಧರಿಸಿ ಆಸ್ಪತ್ರೆ ವೈದ್ಯರ ಒಪ್ಪಿಗೆ ಪಡೆದು ಮೊರದಾಬಾದ್​ಗೆ ಸ್ಥಳಾಂತರ ಮಾಡಲು ನಿರ್ಧರಿಸಿದ್ದರು. ಅದರಂತೆ ಏರ್ ಲಿಫ್ಟ್ ಮಾಡಲು ನಿರ್ಧರಿಸಲಾಗಿತ್ತು. ಆದರೆ ವಿಮಾನಯಾನ ಸಂಸ್ಥೆಯು ವೈದ್ಯರು ಮತ್ತು ದಾದಿಯರಿಲ್ಲದೆ ರೋಗಿಯನ್ನು ವಿಮಾನದಲ್ಲಿ ಕೊಂಡೊಯ್ಯಲು ನಿರಾಕರಿಸಿತ್ತು.

ಇದರಿಂದ ಬೇರೆ ದಾರಿ ಕಾಣದೆ ರೋಗಿಯನ್ನು ಮತ್ತೆ ಮೂಡಬಿದಿರೆಯ ಆಸ್ಪತ್ರೆಯಲ್ಲಿಯೇ ದಾಖಲಿಸಲಾಯಿತು. ಮಹಾಂದಿ ಹಸ್ಸನ್ ತಂದೆ ಬಬ್ಬು ಅವರು ಆಂಬ್ಯುಲೆನ್ಸ್ ಮಾಲೀಕ ಅನಿಲ್ ರೂಬನ್ ಮೆಂಡೋನ್ಸಾರಲ್ಲಿ ಆಂಬ್ಯುಲೆನ್ಸ್​ನಲ್ಲಿಯೇ ಮೊರದಾಬಾದ್​ಗೆ ತಲುಪಿಸಲು ಕೋರಿದ್ದರು. ಅವರ ಕೋರಿಕೆಯ ಮೇರೆಗೆ ಮೊರದಾಬಾದ್​ಗೆ ರೋಗಿಯ ಹಸ್ತಾಂತರಕ್ಕೆ ಒಪ್ಪಿದ್ದಾರೆ.

ಆಂಬ್ಯುಲೆನ್ಸ್‌ನ ಚಾಲಕ ಅಶ್ವತ್ಥ್​ ಅವರೊಂದಿಗೆ ಅನಿಲ್ ರೂಬನ್ ಮೆಂಡೋನ್ಸಾ, ರೋಗಿ ಮಹಾಂದಿ ಹಸ್ಸನ್ ತಂದೆ, ಸ್ನೇಹಿತರು ಸೇರಿ ರೋಗಿಯನ್ನು ಆ್ಯಂಬುಲೆನ್ಸ್ ನಲ್ಲಿ ಕೊಂಡೊಯ್ದಿದ್ದಾರೆ. ಸೆ.10ರಂದು ಮೂಡಬಿದಿರೆಯಿಂದ ಹೊರಟ ಆಂಬ್ಯುಲೆನ್ಸ್ ಸೆ.12ರ ಬೆಳಗ್ಗೆ ಮೊರದಾಬಾದ್ ತಲುಪಿದೆ. ಡೀಸೆಲ್ ಹಾಕಲು ನಿಲ್ಲಿಸಿದ್ದು ಬಿಟ್ಟರೆ ಎಲ್ಲಿಯೂ ವಿಶ್ರಾಂತಿ ಪಡೆಯದೆ ನಿರಂತರವಾಗಿ ಚಲಿಸಿ ಗುರಿ‌ಮುಟ್ಟಲಾಗಿದೆಯಂತೆ. ಚಾಲಕ ಸೇರಿದಂತೆ ಯಾರು ಊಟ, ತಿಂಡಿಗೂ ವಾಹನವನ್ನು ನಿಲ್ಲಿಸಿಲ್ಲ. ರೋಗಿಗೆ ಮೂರು ಗಂಟೆಗೊಮ್ಮೆ ದ್ರವ ಆಹಾರ ನೀಡಬೇಕಿದ್ದು, ಈ ಸಂದರ್ಭದಲ್ಲಿ ವಾಹನ ಚಾಲಕ ಸನಿಹದಲ್ಲಿ ಸಿಗುವ ಜ್ಯೂಸ್ ಕುಡಿದು ವಾಹನ ಚಾಲನೆಗೆ ಸಜ್ಜಾಗುತ್ತಿದ್ದರು. ಇದೀಗ ರೋಗಿಗೆ ಪ್ರಜ್ಞೆ ಬಂದು ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

Edited By : Vijay Kumar
Kshetra Samachara

Kshetra Samachara

18/09/2022 11:04 pm

Cinque Terre

1.85 K

Cinque Terre

2

ಸಂಬಂಧಿತ ಸುದ್ದಿ