ಮುಲ್ಕಿ: ಮುಲ್ಕಿ ನಗರ ಪಂಚಾಯತ್, ಶ್ರೀ ದೇವಿ ಸಮಾಜ ಕಾರ್ಯಸಂಸ್ಥೆ ಮಂಗಳೂರು, ಯೆನಪೋಯ ಮೆಡಿಕಲ್ ಹಾಗೂ ಡೆಂಟಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರ ಮುಲ್ಕಿ ನಗರ ಪಂಚಾಯತ್ ನ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಾತನಾಡಿ ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಗ್ರಾಮಸ್ಥರು ಪಡೆದು ಆರೋಗ್ಯವಂತರಾಗಿ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಲ್ಕಿ ನಗರ ಪಂಚಾಯತ್ ಸದಸ್ಯ ಮಂಜುನಾಥ ಕಂಬಾರ, ರಾಧಿಕಾ ಯಾದವ ಕೋಟ್ಯಾನ್, ನರಸಿಂಹ ಪೂಜಾರಿ, ಸಿಬ್ಬಂದಿ. ಕಿಶೋರ್, ಪ್ರಕಾಶ್ ಶ್ರೀ ದೇವಿ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ವರ್ಕ್ ನ ಪ್ರಾಂಶುಪಾಲರಾದ ಅಭಿತ ಎಸ್. ಉಪನ್ಯಾಸಕರಾದ ಅಶ್ವಿನಿ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.ಬಳಿಕ ವೈದ್ಯಕೀಯ ಶಿಬಿರ ನಡೆಯಿತು.
Kshetra Samachara
21/07/2022 11:24 am