ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಡೆಂಗ್ಯೂ ಮಲೇರಿಯಾ ಬೀತಿ ಇದ್ದು , ಮುಂಜಾಗ್ರತೆ ವಹಿಸಬೇಕಾಗಿದೆ.
ಈ ನಿಟ್ಟಿನಲ್ಲಿ ಪಂ. ಪಂ. ಪ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪಟ್ಟಣ ಪಂಚಾಯತ್‌ನ ಜೊತೆ ಸಮನ್ವತೆಯಿಂದ ಕೆಲಸ ಮಾಡಬೇಕಾಗಿದೆ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯೀಶ್ ಚೌಟ ಹೇಳಿದರು.
ಅವರು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಟೀಲು ಹಾಗೂ ಅತ್ತೂರು ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರ ವೈದಾಧಿಕಾರಿ ಹಾಗೂ ಆಶಾ ಕಾರ್ಯಕರ್ತೆಯರ ಮಾರಕ ರೋಗಗಳ ನಿಯಂತ್ರಣ ಮುಂಜಾಗರೂಕತಾ ಸಭೆಯಲ್ಲಿ ಮಾತನಾಡಿ ಪಂ. ಪಂ. ವ್ಯಾಪ್ತಿಯಲ್ಲಿ ಕಂದಾಯ ಎಂಡು ಗ್ರಾಮಗಳು ಬರುತ್ತಿದ್ದು ಆರೋಗ್ಯ ವಿಷಯದಲ್ಲಿ ಮಾಹಿತಿಯನ್ನು ಪಟ್ಟಣ ಪಂಚಾಯತ್ ಜೊತೆಗೆ ಸಹಕಾರ ನೀಡಬೇಕು ಎಂದರು.
ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಭಾಸ್ಕರ ಕೋಟ್ಯಾನ್ ಮಾತನಾಡಿ ಮಳೆಗಾಲ ಮಳೆ ಕಡಿಮೆ ಆಗಿರುವುದರಿಂದ ಡೆಂಗ್ಯೂ ಹಾಗೂ ಮಲೇರಿಯ ಹಬ್ಬಲು ಕಾರಣವಾಗುತ್ತದೆ. ಕಿನ್ನಿಗೋಳಿ ಪರಿಸದರಲ್ಲಿ ಮಲೇರಿಯ ಒಂದು ಪ್ರಕರಣ ಕಾಣಿಸಿಕೊಂಡಿದೆ. ಜಾಗ್ರತೆ ಅಗತ್ಯವಿದೆ. ಮಲೇರಿಯಾ ಗಿಂತ ಡೆಂಗ್ಯೂ ತುಂಬಾ ಅಪಾಯಕಾರಿಯಾಗಿದೆ ಈ ನಿಟ್ಟಿನಲ್ಲಿ ಜ್ವರ ಬಂದವರು ನಿರ್ಲಕ್ಷ ಮಾಡದೆ ಆರೋಗ್ಯ ಕೇಂದ್ರ ವೈದ್ಯರ ಬಳಿ ತಪಾಸಣೆ ಮಾಡ ಬೇಕಾಗಿದೆ ಎಂದರು.
ಅತ್ತೂರು ಕೆಮ್ರಾಲ್ ವೈದ್ಯಾಧಿಕಾರಿ ಡಾ| ಚಿತ್ರಾ ಮಾತನಾಡಿ ಕೋವಿಡ್ ಇನ್ನು ಮುಗಿದಿಲ್ಲ ನಿರ್ಲಕ್ಷ ಬೇಡ ಮುಂಜಾಗ್ರತೆ ಅಗತ್ಯವಿದೆ ಎಂದರು ರೇವತಿಪುರುಷೋತ್ತಮ್ ಕಾರ್ಯಕ್ರಮ ನಿರೂಪಿಸಿದರು.
Kshetra Samachara
28/06/2022 09:10 pm