ಮುಲ್ಕಿ:ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು ಕೆಮ್ರಾಲ್ , ಹಳೆಯಂಗಡಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಸಸಿಹಿತ್ಲು ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಅಸಾಂಕ್ರಾಮಿಕ ರೋಗಗಳ ತಪಾಸಣಾ ಶಿಬಿರ ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ಮಾತನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗಾಲದ ಪೂರ್ವ ಸಿದ್ಧತೆ ನಡೆಸಿದ್ದು ಮಾರಕ ರೋಗಗಳ ಹರಡುವಿಕೆ ಬಗ್ಗೆ ಗ್ರಾಮಸ್ಥರು ಸ್ವಚ್ಛತೆ ಮೂಲಕ ಎಚ್ಚರಿಕೆ ವಹಿಸಬೇಕು ಎಂದರು. ಪಂಚಾಯತ್ ಉಪಾಧ್ಯಕ್ಷ ಅಶೋಕ್ ಬಂಗೇರ, ಸದಸ್ಯರಾದ ಸವಿತಾ, ಚಂದ್ರಕುಮಾರ್. ಅನಿಲ್ ಕುಮಾರ್. ಸಮುದಾಯ ಆರೋಗ್ಯ ಅಧಿಕಾರಿ ಸಜಿಲ್ ಟೋಮ್ ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ ಗೀತ , ಅಂಗನವಾಡಿ ಟೀಚರ್ ಕವಿತಾ, ಆಶಾ ಕಾರ್ಯಕರ್ತೆಯರಾದ ಸುಶೀಲ, ಲಲಿತ ಹಾಗೂ ಪುಷ್ಪ. ಮತ್ತಿತರರು ಉಪಸ್ಥಿತರಿದ್ದರು.
Kshetra Samachara
06/06/2022 04:33 pm