ಮೂಲ್ಕಿ: ಗ್ರಾಮೀಣ ಭಾಗದ ಜನರ ಅವಶ್ಯಕತೆಗಾಗಿ ನಿರಂತರ ಉಚಿತ ಆರೋಗ್ಯ ಸೇವೆ ನಡೆಸಲಾಗುತ್ತಿದೆ ಎಂದು ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ.ನರಸಿಂಹ ಪೈ ಹೇಳಿದರು.
ಮುಲ್ಕಿಯ ಶ್ರೀಧರ ಪದ್ಮನಾಭ ಕಾಮತ್ ಸ್ಮಾರಕ ಸಭಾಭವನದಲ್ಲಿ ಮುಲ್ಕಿ ಜಿಎಸ್ಬಿ, ಜೇಸಿಐ ಮೂಲ್ಕಿ ಶಾಂಭವಿ, ರೆಡ್ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್, ಸರಕಾರಿ ಲೇಡಿಗೋಶನ್ ಆಸ್ಪತ್ರೆ, ಎಮ್ಎಆರ್ ಕುಡ್ವ ಚಾರಿಟೇಬಲ್ ಟ್ರಸ್ಟ್, ಪಡುಬಿದ್ರಿ ಐ-ನೀಡ್ಸ್ ಗ್ರೂಪ್ಸ್, ಕಟೀಲು ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ, ಅತ್ತಾವರ ಕೆಎಮ್ಸಿ ಆಸ್ಪತ್ರೆ, ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸಯನ್ಸಸ್ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ ಉಚಿತ ವೈದ್ಯಕೀಯ ಮತ್ತು ದಂತ ತಪಾಸಣೆ, ಕಣ್ಣಿನ ತಪಾಸಣಾ ಶಿಬಿರ, ಮಾಹಿತಿ ಕಾರ್ಯಾಗಾರ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಿದ್ಧ ವೈದ್ಯರುಗಳಾದ ಡಾ.ಶಿವಾನಂದ ಪ್ರಭು, ಡಾ.ಅರುಣ್ ಎಸ್., ಡಾ.ಸುಧೀಂದ್ರ ಕಾರ್ನಾಡ್, ಡಾ.ಸಂಗೀತ ಭಟ್, ಡಾ.ಅಜಯ್ ಎ.ಕುಡ್ವ, ಜೇಸಿಐ ಮೂಲ್ಕಿ ಶಾಂಭವಿ ಅಧ್ಯಕ್ಷ ಕಲ್ಲಪ್ಪ ತಡವಲಗ, ಜೆಸಿಐ ವಲಯ ಉಪಾಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಪೂರ್ವ ವಲಯಾಧಿಕಾರಿ ನವೀನ್ ಶೆಟ್ಟಿ, ಜಿಎಸ್ಬಿ ಸಭಾ ಅಧ್ಯಕ್ಷ ಸತ್ಯೇಂದ್ರ ಶೆಣೈ, ಕಾರ್ಯದರ್ಶಿ ವಿನೋದ್ ಶೆಣೈ, ಕೋಶಾಧಿಕಾರಿ ವಿಶ್ವನಾಥ ಶೆಣೈ, ಎಚ್.ವಿಶ್ವನಾಥ ಶೆಣೈ, ಪಾಂಡುರಂಗ ಭಟ್, ಅಜಿತ್ ಶೆಣೈ, ಅಶೋಕ್ ಕಾಮತ್, ಕೆ.ನಾರಾಯಣ ಶೆಣೈ ಉಪಸ್ಥಿತರಿದ್ದರು.
ಶಿಬಿರದಲ್ಲಿ 45 ಮಂದಿ ರಕ್ತದಾನಗೈದರು. 400ರಷ್ಟು ಮಂದಿ ವೈದ್ಯಕೀಯ ಸೇವೆ ಪಡೆದರು.
Kshetra Samachara
24/04/2022 07:47 pm