ಮುಲ್ಕಿ: ಗ್ರಾಮೀಣ ಪ್ರದೇಶದಲ್ಲಿ ಸಂಘ ಸಂಸ್ಥೆಗಳು ಕೇವಲ ಕ್ರೀಡೆ ಮತ್ತು ವಾರ್ಷಿಕೋತ್ಸವಕ್ಕೆ ಸೀಮಿತವಾಗದೆ ಎಲ್ಲಾ ವರ್ಗದ ಜನರಿಗೆ ತಲುಪುವಂತಹ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಳ್ಳಬೇಕೆಂದು ಕಿನ್ನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್,ಯುಗಪುರುಷ ಕಿನ್ನಿಗೋಳಿ,ಬಂಟರ ಸಂಘ ಮೂಲ್ಕಿ,ಲಯನ್ಸ್ ಮತ್ತು ಲಿಯೋ ಕ್ಲಬ್ ಕಿನ್ನಿಗೋಳಿ,ರೋಟರಿ ಕ್ಲಬ್ ಕಿನ್ನಿಗೋಳಿ,ಶ್ರೀ ರಾಮ ಯುವಕ ವೃಂದ(ರಿ) ಗೋಳಿಜೋರ,ಭ್ರಾಮರಿ ಮಹಿಳಾ ಸಮಾಜ(ರಿ) ಮೆನ್ನಬೆಟ್ಟು-ಕಿನ್ನಿಗೋಳಿ,ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮಂಗಳೂರು ತಾಲೂಕುನ ಸಂಯುಕ್ತ ಆಶ್ರಯದಲ್ಲಿ ಕೆ ಎಂ ಸಿ ಆಸ್ಪತ್ರೆ ಅತ್ತಾವರ ಮಂಗಳೂರಿನ ಸಹಯೋಗದೊಂದಿಗೆ ಜರಗಿದ ಉಚಿತ ವ್ಯೆದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಹಿಲ್ಡಾ ಡಿ ಸೋಜ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ , ರೋಟರಿ ಅಧ್ಯಕ್ಷ ದೇವಿದಾಸ್ ಶೆಟ್ಟಿ , ಲಿಯೋಕ್ಲಬ್ ಅಧ್ಯಕ್ಷ ಸುದೀಪ್ ಡಿಸೋಜ , ಪಟ್ಟಣ ಪಂಚಾಯತ್‌ನ ರೇವತಿ ಪುರುಷೋತ್ತಮ್, ಭ್ರಾಮರೀ ಮಹಿಳಾ ಮಂಡಳಿಯ ಅಧ್ಯಕ್ಷೆ ಅನುಷಾ ಕರ್ಕೇರಾ, ಶ್ರೀ ರಾಮ ಯುವಕ ವೃಂದದ ಚಂದ್ರಶೇಖರ್, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಶುಭಲತಾ ಶೆಟ್ಟಿ , ಕೆ. ಎಮ್. ಸಿ ವೈದ್ಯಾಧಿಕಾರಿ ಡಾ| ಗೌತಮ್ , ಕನ್ನಡಕ ವಿಭಾಗದ ದಯಾನಂದ , ಒಡಿಯೂರು ಸಂಘದ ಶಾಂಭವಿ, ಮೀನಾಕ್ಷಿ , ಲಯನ್ಸ್ ಕಾರ್ಯದರ್ಶಿ ಪ್ರಾನ್ಸಿಸ್ ಸೆರಾವೂ, ಯೋಗೀಶ್ ರಾವ್, ಭ್ರಾಮರೀ ಮಹಿಳಾ ಮಂಡಳಿಯ ಸಂಧ್ಯಾ, ಜಯಶ್ರೀ ಉಪಸ್ಥಿತರಿದ್ದರು.
ಶಿಬಿರದಲ್ಲಿ ಸಾಮಾನ್ಯ ರೋಗ,ಎಲುಬು ಮತ್ತು ಕೀಲು,ಕಣ್ಣಿನ ,ಕಿವಿ ಮೂಗು ಮತ್ತು ಗಂಟಲು,ಮಕ್ಕಳ ರೋಗ ತಜ್ಞರು ಭಾಗವಹಿಸಿದ್ದು 150 ಕ್ಕೂ ಹೆಚ್ಚು ಜನರು ಭಾಗವಹಿಸಿ ಪ್ರಯೋಜನ ಪಡೆದರು. 50 ಕ್ಕೂ ಮಿಕ್ಕಿ ಕನ್ನಡಕ ವಿತರಣೆ ನಡೆಯಿತು. ಪ್ರಕಾಶ್ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
18/04/2022 02:17 pm