ಮುಲ್ಕಿ: ಮುಲ್ಕಿ ಸಮೀಪದ ಪುನರೂರು ಶ್ರೀ ಬ್ರಹ್ಮ ಮುಗೇರ ದೈವಸ್ಥಾನ ಚಾರಿಟೇಬಲ್ ಟ್ರಸ್ಟ್ ಹಾಗೂ ಸೇವಾನಿಧಿ ಪುನರೂರು ಜಂಟಿ ಆಶ್ರಯದಲ್ಲಿ ಪುನರೂರು ಶ್ರೀ ಬ್ರಹ್ಮ ಮುಗೇರ ದೈವಸ್ಥಾನದ ವಠಾರದಲ್ಲಿ ಆಯುಷ್ಮಾನ್ ಕಾರ್ಡ್ ಹಾಗೂ ಇ -ಶ್ರಮ್ ಕಾರ್ಡ್ ನೋಂದಣಿ ಶಿಬಿರ ನಡೆಯಿತು.
ಶಿಬಿರ ಉದ್ಘಾಟಿಸಿ ಶ್ರೀ ಬ್ರಹ್ಮ ಮುಗೇರ ದೈವಸ್ಥಾನದ ಅಧ್ಯಕ್ಷ ಹರೀಶ್ ಮಾತನಾಡಿ "ಗ್ರಾಮೀಣ ಪ್ರದೇಶದಲ್ಲಿ ಶಿಬಿರಗಳು ನಾಗರಿಕರಿಗೆ ಸಹಕಾರಿಯಾಗಲಿದೆ" ಎಂದರು.
ವೇದಿಕೆಯಲ್ಲಿ ಕಾರ್ಯದರ್ಶಿಉಮೇಶ್ ಪಿ, "ಸೇವಾನಿಧಿ"ಯ ಗೌರವ ಅಧ್ಯಕ್ಷ ಸುರೇಶ್ ರಾವ್ ಪುನರೂರು, ಅಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ಗೋವರ್ಧನ್ ಪದ್ಮಶಾಲಿ , ಶ್ರೀ ಬ್ರಹ್ಮ ಮುಗೇರ ದೈವಸ್ಥಾನ ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ ಗೋಪಾಲ ಕೃಷ್ಣ ಆರ್, ಆಶಾ-ಕಾರ್ಯಕರ್ತೆಯರಾದ ಲತಾ, ಶಶಿಕಲಾ, ಸುಷ್ಮಾ ಮಂಗಳೂರು-1 ಕಾರ್ಯ ಕರ್ತೆ, ವಿಶಾಲಾಕ್ಷಿ,ಸೇವಾಪ್ರತಿನಿಧಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಆಯುಷ್ಮಾನ್ ಕಾರ್ಡ್ ಹಾಗೂ ಇ -ಶ್ರಮ್ ಕಾರ್ಡ್ ನ ಫಲಾನುಭವಿಗಳು ಸದುಪಯೋಗವನ್ನು ಪಡೆದುಕೊಂಡರು.
Kshetra Samachara
27/03/2022 06:28 pm