ಮುಲ್ಕಿ:ಮುಲ್ಕಿ ರೋಟರಿ ಕ್ಲಬ್ ವತಿಯಿಂದ ರೋಟರಿ ಪಬ್ಲಿಕ್ ಇಮೇಜ್ ಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಳದ ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ ಚಾಲನೆ ನೀಡಿದರು.
ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ್ ಜಿ.ಅಮೀನ್ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೋಟರಿಕ್ಲಬ್ ಅನೇಕ ಸಾಮಾಜಿಕ ಕಾರ್ಯಗಳ ಜೊತೆಗೆ ಸಹಾಯ ಹಸ್ತದ ಮೂಲಕ ಬಡವರ ಹಿಂದುಳಿದ ವರ್ಗದವರ ಕಣ್ಣೊರೆಸುವ ಕೈಂಕರ್ಯ ನಡೆಸುತ್ತಿದೆ ಎಂದರು.
ಈ ಸಂದರ್ಭ ರೋಟರಿ ಅಸಿಸ್ಟೆಂಟ್ ಗವರ್ನರ್ ಅರುಣ್ ಭಂಡಾರಿ, ಜಿಲ್ಲಾ ಪಬ್ಲಿಕ್ ಇಮೇಜ್ ಚೇರ್ಮನ್ ಸತೀಶ್ ಬೋಳಾರ್, ವಲಯ ಸೇನಾನಿ ಅಶೋಕ್ ಕುಮಾರ್ ಶೆಟ್ಟಿ, ನಿಯೋಜಿತ ಗವರ್ನರ್ ನಾರಾಯಣ ಎಂ, ಕಾರ್ಯದರ್ಶಿ ರವಿಚಂದ್ರ, ಮಲ್ಲಿಕಾರ್ಜುನ ಆರ್ ಕೆ, ಕೆನ್ಯೂಟ್ ಪಿಂಟೋ, ರಾಜ್ ಪತ್ರಾವೋ, ಮತ್ತಿತರರು ಉಪಸ್ಥಿತರಿದ್ದರು.
Kshetra Samachara
21/03/2022 12:34 pm