ಮುಲ್ಕಿ: ಹಳೆಯಂಗಡಿ ಸಮೀಪದ ಪಾವಂಜೆ ಓಂ ಕ್ರಿಕೆಟರ್ಸ್ ನ 13ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಡೆಯಿತು
ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೂರ್ಯಕುಮಾರ್ ಬೊಳ್ಳೂರು ಮಾತನಾಡಿ ಕೋವಿಡ್ ಸಂಕಷ್ಟದ ದಿನಗಳಲ್ಲಿ ಹಗಲಿರುಳೆನ್ನದೆ ವೈದ್ಯರು ಜೀವವನ್ನು ಪಣಕ್ಕಿಟ್ಟು ಮಾಡಿದ ಸಾಧನೆ ಅಭಿನಂದನೀಯ ಎಂದರು.
ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಂದ್ರಶೇಖರ್ ನಾಣಿಲ್, ಪಾವಂಜೆ ಜ್ಞಾನ ಶಕ್ತಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿ ಯಾಜಿ ನಿರಂಜನ್ ಭಟ್, ಓಂ ಕ್ರಿಕೆಟರ್ಸ್ ಪಾವಂಜೆ ಅಧ್ಯಕ್ಷ ನಾಗೇಶ್
ಉಪಾಧ್ಯಕ್ಷ ಅವಿನಾಶ್ ಕಾರ್ಯದರ್ಶಿ ಸುನಿಲ್ ಕೋಶಾಧಿಕಾರಿ ಕಾರ್ತಿಕ್ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಳೆಯಂಗಡಿಯ ವೈದ್ಯರುಗಳಾದ ಡಾ. ಗುರುಪ್ರಸಾದ್ ನಾವಡ ಮತ್ತು ಡಾ.ನಂದಿನಿರವರ ವೈದ್ಯಕೀಯ ಕ್ಷೇತ್ರದ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಫೇಮಸ್ ಯೂತ್ ಕ್ಲಬ್ ನ ಅಧ್ಯಕ್ಷ ಭಾಸ್ಕರ್ ಅಮೀನ್ ತೋಕೂರು ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Kshetra Samachara
09/03/2022 05:34 pm