ಮುಲ್ಕಿ: ಮುಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು ಕೆಮ್ರಾಲ್ ಹಾಗೂ ಮಂಗಳೂರು-1 ರ ಜಂಟಿ ಆಶ್ರಯದಲ್ಲಿ ಆಯುಷ್ಮಾನ್ ಹಾಗೂ ಇ- ಶ್ರಮ್ ಕಾರ್ಡ್ ಶಿಬಿರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಅಧ್ಯಾಪಕ ಅಚ್ಚುತ ಮಾಸ್ತರ್ ಕೊಲಕಾಡಿ ನೆರವೇರಿಸಿದರು. ಅತಿಕಾರಿಬೆಟ್ಟು ಪಂಚಾಯತ್ ಅಧ್ಯಕ್ಷ ಮನೋಹರ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿ ಶಿಬಿರದ ಸದುಪಯೋಗವನ್ನು ಗ್ರಾಮಸ್ಥರು ಪಡೆಯಲು ವಿನಂತಿಸಿದರು.
ಪಂಚಾಯತ್ ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಗೀತಾ, ಜಯಕುಮಾರ್, ಮಂಗಳೂರು-1ನ ಸುಷ್ಮಾ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
Kshetra Samachara
13/02/2022 08:10 pm