ಮಂಗಳೂರು:ಸಮಾಜಸೇವಾ ಸಂಸ್ಥೆ ತಮ್ಮ ಸಂಜೀವಿನಿ ಅಭಿಯಾನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಸಲಕರಣೆಗಳನ್ನು ನೀಡುವ ಯೋಜನೆಗೆ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಚಾಲನೆ ನೀಡಿದರು.
ಕೋವಿಡ್ ಸೆಂಟರ್ ಗಳಿಗೂ ಅಗತ್ಯವಿರುವ ವಸ್ತುಗಳನ್ನು ಕೂಡ ಈ ಸಂಸ್ಥೆ ನೀಡಲಿದ್ದು, ಬಳಿಕ ಪದಾಧಿಕಾರಿಗಳಿಗೆ ಮತ್ತು ಸೇವಾರ್ಥಿಗಳಿಗೆ ಶಾಸಕರು ಶುಭ ಕೋರಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
11/02/2022 12:52 pm