ಮುಲ್ಕಿ: ಕಿನ್ನಿಗೋಳಿ ಸಮೀಪದ ಶ್ರೀರಾಮ ಯುವಕ ವೃಂದ ಗೋಳಿಜೋರ ವತಿಯಿಂದ ಶಿಮಂತೂರು ಶ್ರೀ ಶಾರದಾ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾವಳಿ ನಡೆಯಿತು.
ಎಂಆರ್ ಪಿಎಲ್ ನಿರ್ದೇಶಕ ರುಡೋಲ್ಫ್ ಜೋಯರ್ ನೊರೊನ್ನಾ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಜಿಪಂ ಸದಸ್ಯ ಪ್ರಮೋದ್ ಕುಮಾರ್ ವಹಿಸಿ ಮಾತನಾಡಿ, ಪುಟ್ಭಾಲ್ ಕ್ರೀಡೆಯು ಆತ್ಮಸ್ಥೈರ್ಯ ಹೆಚ್ಚಿಸುವುದರೊಂದಿಗೆ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದರು.
ಮುಖ್ಯ ಅಭ್ಯಾಗತರಾಗಿ ಕಿನ್ನಿಗೋಳಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಜೋಸ್ಸಿ ಪಿಂಟೋ, ರಘುರಾಮ ಶೆಟ್ಟಿ ಏಳಿಂಜೆ, ಮುಲ್ಕಿ ವಲಯ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ , ಕಿಲೆಂಜೂರು ಸಂಘದ ಗೌರವ ಸಲಹೆಗಾರರಾದ ಸುಧಾಕರ ಶೆಟ್ಟಿ ಕಿನ್ನಿಗೋಳಿ, ಶಂಕರ್ ಮಾಸ್ಟರ್ ಗೋಳಿಜೋರ, ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ಮುಲ್ಕಿ ವಲಯ ಅಧ್ಯಕ್ಷ ನವೀನ್ ಚಂದ್ರ, ಅಕ್ಬರ್ ಗೋಳಿಜೋರ, ಉದ್ಯಮಿ ಪುರುಷೋತ್ತಮ ಶೆಟ್ಟಿ , ಹರಿಹರ ಶ್ರೀ ರಾಮ ಭಜನಾ ಮಂದಿರ ಮತ್ತು ಕೋರ್ದಬ್ಬು ದೈವಸ್ಥಾನದ ಅಧ್ಯಕ್ಷರಾದ ಚೇತನ್ ಗೋಳಿ ಜೋರಾ, ಕ್ರೀಡಾ ಅಧ್ಯಕ್ಷ ಹರಿಕೃಷ್ಣ ಗೋಳಿಜೋರ,ಕಿನ್ನಿಗೋಳಿ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಗೋಳಿ ಜೋರ, ಸಂಘದ ಸದಸ್ಯರಾದ ಮನೋಜ್ ಕುಮಾರ್, ನಾಗೇಶ್ ಉಪಸ್ಥಿತರಿದ್ದರು.
ಶ್ರೀರಾಮ ಯುವಕ ವೃಂದ ಅಧ್ಯಕ್ಷರಾದ ಪ್ರಕಾಶ್ ಕಿನ್ನಿಗೋಳಿ ಸ್ವಾಗತಿಸಿ, ವಂದಿಸಿದರು.
Kshetra Samachara
28/12/2020 04:26 pm