ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲ್ಯಾಡಿ: ಕೊರೊನಾ ಮುಕ್ತ ಹಿರಿಯ ನಾಗರಿಕರಿಗೆ ಸನ್ಮಾನ

ನೆಲ್ಯಾಡಿ: ಕೊರೊನಾ ರೋಗ ಮುಕ್ತವಾಗಿ ಬಂದಿರುವ ಹಿರಿಯ ನಾಗರಿಕರನ್ನು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸನ್ಮಾನಿಸಲಾಯಿತು.

ವೈದ್ಯಾಧಿಕಾರಿ ಡಾ. ಸೌಮ್ಯ ಮತ್ತು ಸಿಬಂದಿ ಒಟ್ಟು ಸೇರಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ರೋಗಮುಕ್ತರಾಗಿ ಬಂದ ನೆಲ್ಯಾಡಿ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ನೆಲ್ಯಾಡಿ ಪ್ರದೇಶದಲ್ಲಿ ಕೊರೊನಾ ಆರಂಭದ ದಿನದಿಂದ ಈ ತನಕ ರೋಗದ ಸಾಮೂಹಿಕ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸೇವೆ ಸಲ್ಲಿಸಿದ ನೆಲ್ಯಾಡಿ ವೈದ್ಯಾಧಿಕಾರಿ ಡಾ. ಸೌಮ್ಯ ನೇತೃತ್ವದ ಎಲ್ಲ ಸಿಬ್ಬಂದಿಗೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಸಾರ್ವಜನಿಕರು ವಂದನೆ, ಕೃತಜ್ಞತೆ ಸಲ್ಲಿಸಿದರು.

Edited By : Nirmala Aralikatti
Kshetra Samachara

Kshetra Samachara

07/10/2020 07:42 am

Cinque Terre

11.67 K

Cinque Terre

0

ಸಂಬಂಧಿತ ಸುದ್ದಿ