ಮಂಗಳೂರು : ಕೊರೊನಾ ತಡೆಗಾಗಿ ಮಾಸ್ಕ್ ಬಳಸಿ ಇಲ್ಲವಾದ್ರೆ ದಂಡ ಹಾಕತ್ತೇವೆ ಎಂದು ಸರ್ಕಾರ ಎಷ್ಟೇ ಎಚ್ಚರಿಕೆ ಕೊಟ್ರು ನಮ್ಮ ಜನ ಮಾತ್ರ ಕ್ಯಾರೆ ಎನ್ನಲ್ಲ.
ಹಾಗಾಗಿಯೇ ದಂಡದ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ಭಾರಿ ದಂಡ ಜಮಾ ಆಗುತ್ತಿದೆ.
ದ.ಕ. ಜಿಲ್ಲೆಯಲ್ಲೂ ಮಾಸ್ಕ್ ಧರಿಸದೇ ಇದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.
ಸ್ಥಳೀಯಾಡಳಿತದ ಅಧಿಕಾರಿಗಳು, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ.
ಅಕ್ಟೋಬರ್ 17ರ ಶನಿವಾರದ ತನಕ ದ.ಕ ಜಿಲ್ಲೆಯಲ್ಲಿ ಒಟ್ಟು 8104 ಮಾಸ್ಕ್ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.
ಇವರಿಂದ ಒಟ್ಟು 9,45,875 ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
Kshetra Samachara
19/10/2020 04:23 pm