ಕಡಬ: ಅನಾರೋಗ್ಯಕ್ಕೆ ಒಳಗಾಗಿ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಕಡಬ ಪಟ್ಟಣ ವ್ಯಾಪ್ತಿಯ ಕೋಡಿಂಬಾಳದಲ್ಲಿ ನಡೆದಿದೆ.
ಕೋಡಿಂಬಾಳ ಗ್ರಾಮದ ಹಮೀದ್ ನ್ಯಾಷನಲ್ ಎಂಬವರ ಏಕೈಕ ಪುತ್ರಿ ಫಾತಿಮತ್ ತಬ್ ಶೀರಾ(18) ಮೃತಪಟ್ಟವರು.
ನಾಲ್ಕು ದಿನಗಳ ಹಿಂದೆ ಜಾಂಡೀಸ್(ಹಳದಿ ರೋಗ) ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗಿತ್ತು.
ಸೋಮವಾರ ರಾತ್ರಿ ಏಕಾಏಕಿ ಅನಾರೋಗ್ಯ ಕಾಡಿದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
Kshetra Samachara
15/12/2020 01:12 pm