ಮುಲ್ಕಿ: ಮುಲ್ಕಿ ಬಳಿಯ ಅತಿಕಾರಿಬೆಟ್ಟು ಗ್ರಾಪಂ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಪಂ ಅತಿಕಾರಿ ಬೆಟ್ಟು, ಆಯುಷ್ ಇಲಾಖೆ ಸಹಕಾರದಲ್ಲಿ "ಬೇಟಿ ಬಚಾವೋ ಬೇಟಿ ಪಡಾವೋ" ಯೋಜನೆಯಡಿ ಆರು ತಿಂಗಳಿಂದ ಒಂದು ವರ್ಷದೊಳಗಿನ ಹೆಣ್ಣು ಶಿಶುಪ್ರದರ್ಶನ ಕಾರ್ಯಕ್ರಮ ಜರುಗಿತು.
ಅತಿಕಾರಿಬೆಟ್ಟು ಪಿಡಿಒ ರವಿ ಉದ್ಘಾಟಿಸಿ ಮಾತನಾಡಿ, ಕೊರೊನಾ ದಿನಗಳಲ್ಲಿ ಸ್ವಚ್ಛತೆ ಕಾಪಾಡುವುದರ ಜೊತೆಗೆ ತಾಯಂದಿರು ಮತ್ತು ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಅಭಿನಂದಿಸಿದರು.
ಆರೋಗ್ಯವಂತ ಹೆಣ್ಣು ಶಿಶುವನ್ನು ಗುರುತಿಸಿ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಆಯುಷ್ ಚಿಕಿತ್ಸಾಲಯ ಬಳ್ಕುಂಜೆ ವೈದ್ಯಾಧಿಕಾರಿ ಡಾ.ಶೋಭಾರಾಣಿ ಮಹಿಳೆ ಮತ್ತು ಮಕ್ಕಳ ಆರೋಗ್ಯ ದ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ನಾಗರತ್ನ, ಸುಲೋಚನಾ, ಪ್ರಜ್ಞಾ ಸಲಹಾ ಕೇಂದ್ರ ಕಾರ್ಯಕ್ರಮ ಸಂಯೋಜಕ ಅಶೋಕ್ ಭಾಗವಹಿಸಿದ್ದರು.
Kshetra Samachara
12/11/2020 03:10 pm