ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಂಗರಗುಂಡಿ ಪಿಎಫ್ ಐ, ಕೆಎಂಸಿ ಆಸ್ಪತ್ರೆ ಆಶ್ರಯದಲ್ಲಿ ರಕ್ತದಾನ ಶಿಬಿರ, ಸನ್ಮಾನ

ಮಂಗಳೂರು: ಪಿಎಫ್ಐ ಅಂಗರಗುಂಡಿ ವಲಯ ಹಾಗೂ ಕೆಎಂಸಿ ಆಸ್ಪತ್ರೆ ಮಂಗಳೂರು ಜಂಟಿ ಆಶ್ರಯದಲ್ಲಿ ಅಂಗರಗುಂಡಿಯಲ್ಲಿ ರಕ್ತದಾನ ಶಿಬಿರ ನಡೆಯಿತು.

ಪಿಎಫ್ಐ ಅಂಗರಗುಂಡಿ ವಲಯಾಧ್ಯಕ್ಷ ಸಮೀರ್ ವಿ.ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಎಂಸಿ ಆಸ್ಪತ್ರೆ ಮಂಗಳೂರು ಬ್ಲಡ್ ಬ್ಯಾಂಕ್ ನ ವೈದ್ಯರಾದ ಡಾ. ಹರ್ಷ ಕುಮಾರ್ ರಕ್ತದಾನ ಮಹತ್ವದ ಬಗ್ಗೆ ವಿವರಿಸಿದರು.

ಈ ಸಂದರ್ಭ ಊರಿನ ಸಮಾಜ ಸೇವಕರಾದ ಇಲ್ಯಾಸ್ ಅಂಗರಗುಂಡಿ, ಬಶೀರ್ ಅಂಗರಗುಂಡಿ ಹಾಗೂ ಆಶಾ ಕಾರ್ಯಕರ್ತೆ ಆಯಿಷಾ ಫಾರೂಕ್ ಅವರನ್ನು ಸನ್ಮಾನಿಸಲಾಯಿತು.  

ಬದ್ರಿಯಾ ಮಸೀದಿ ಅಂಗರಗುಂಡಿ ಅಧ್ಯಕ್ಷ ಅಡ್ವಕೇಟ್ ಮುಕ್ತಾರ್ ಅಹಮದ್, ಕಾರ್ಯದರ್ಶಿ ಗಫೂರ್, ಪಿಎಫ್ಐ ಕಾವೂರು ಡಿವಿಜನ್ ಅಧ್ಯಕ್ಷ ದಾವೂದ್ ಇಮ್ರಾಝ್ ಪೊರ್ಕೋಡಿ, ಊರಿನ ಹಿರಿಯರಾದ ಆತಿಮ್ ಬಾವ ಅಂಗರಗುಂಡಿ ಮೊದಲಾದವರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

02/11/2020 12:08 pm

Cinque Terre

5.74 K

Cinque Terre

0

ಸಂಬಂಧಿತ ಸುದ್ದಿ