ಮುಲ್ಕಿ: ಸಾಮಾಜಿಕ ಕಳಕಳಿಯೊಂದಿಗೆ ಹಳೆಯಂಗಡಿ ಮತ್ತು ಸುತ್ತಮುತ್ತಲಿನ ಪರಿಸರದ ಜನತೆಗೆ ಯಾವೊಂದೂ ಪ್ರತಿಫಲ ಬಯಸದೆ ತುರ್ತು ಪರಿಸ್ಥಿತಿಯಲ್ಲಿ ಜನರ ನೋವಿಗೆ ಸ್ಪಂದಿಸಬೇಕೆನ್ನುವ ಉದ್ದೇಶದಿಂದ ಹಳೆಯಂಗಡಿಯ ಪೂಜಾ ಫ್ರೆಂಡ್ಸ್ ಪ್ರಾರಂಭಿಸಿದ "ರಕ್ಷಕ್ ಆ್ಯಂಬುಲೆನ್ಸ್ ಸೇವೆ"ಗೆ 4 ವರ್ಷ ಸಂದಿವೆ.
ಹಳೆಯಂಗಡಿ ಪರಿಸರದಲ್ಲಿ ಆಪತ್ಪಾಂಧವನಂತೆ ಅನೇಕರ ಜೀವ ಉಳಿಸಲು ಹಗಲು-ರಾತ್ರಿ ಶ್ರಮಿಸಿದ ರಕ್ಷಕ್ ಆ್ಯಂಬುಲೆನ್ಸ್ ಸಿಬ್ಬಂದಿ ಸೇವೆ ಶ್ಲಾಘನೀಯ ಎಂದು ತೋಕೂರು ಫೇಮಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಭಾಸ್ಕರ ಅಮೀನ್ ತಿಳಿಸಿದ್ದಾರೆ.
ಪಕ್ಷಿಕೆರೆ ಸಾಲುಮರದ ತಿಮ್ಮಕ್ಕ ಅಭಿಮಾನಿಗಳ ಸಂಘದ ಮುಖ್ಯಸ್ಥ ವಾಲ್ಟರ್ ಡಿಸೋಜ ಮಾತನಾಡಿ, ಜನಸೇವೆಯೇ ಜನಾರ್ದನ ಸೇವೆ ಮೂಲಕ ಸತತ ನಾಲ್ಕು ವರ್ಷ ಜೀವರಕ್ಷಕರಂತೆ ಹಗಲು-ರಾತ್ರಿ ಶ್ರಮಿಸಿದ ಪೂಜಾ ಫ್ರೆಂಡ್ಸ್ ನ ಮುಖ್ಯಸ್ಥ ಜೈ ಕೃಷ್ಣ ಕೋಟ್ಯಾನ್ ಮತ್ತು ಸಿಬ್ಬಂದಿಗೆ ಅಭಿನಂದನೆ ತಿಳಿಸಿದ್ದಾರೆ.
ಜೈ ಕೃಷ್ಣ ಕೋಟ್ಯಾನ್ ಮಾಧ್ಯಮದೊಂದಿಗೆ ಮಾತನಾಡಿ, ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಸಿಬ್ಬಂದಿ, ನಾಗರಿಕರ ಜೊತೆ ಉತ್ತಮ ಒಡನಾಟದಲ್ಲಿದ್ದು, ಅನೇಕರ ಪ್ರಾಣ ಉಳಿಸಿದ್ದಾರೆ.
ಸಹಕಾರ ನೀಡಿದ ನಾಗರಿಕರಿಗೆ, ಪೊಲೀಸರಿಗೆ, ಮಾಧ್ಯಮ ಮಿತ್ರರಿಗೆ ಕೃತಜ್ಞತೆ ತಿಳಿಸಿದ್ದಾರೆ.
Kshetra Samachara
31/10/2020 09:01 pm