ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ ತಾಪಂ ಕೆಡಿಪಿ ಸಭೆ: ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಜನರಿಗೆ ಕಳಕಳಿಯ ಸಲಹೆ

ಬಂಟ್ವಾಳ: ಬಂಟ್ವಾಳ ತಾಪಂ ಮಾಸಿಕ ಕೆಡಿಪಿ ಸಭೆ ಬುಧವಾರ ಬಿ.ಸಿ.ರೋಡಿನಲ್ಲಿರುವ ತಾಪಂ ಎಸ್ಜಿಎಸ್ವೈ ಸಭಾಂಗಣದಲ್ಲಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮಾಹಿತಿ ನೀಡಿ, ತಾಲೂಕಿನಲ್ಲಿ ಪ್ರಥಮ ಹಂತದ ಶಿಬಿರದಲ್ಲಿ ಸುಮಾರು 4,500 ರಷ್ಟು

ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದು, ಆದರೆ ನಮ್ಮ ಜನಸಂಖ್ಯೆಗೆ ಹೋಲಿಸಿದರೆ ಶೇ.10 ಪರೀಕ್ಷೆ ನಡೆದಿಲ್ಲ. ಹೀಗಾಗಿ ಹೆಚ್ಚಿನ ಜನರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಕಳಕಳಿಯಿಂದ ವಿನಂತಿಸಿದರು.

ಈ ವೇಳೆ ಅಧ್ಯಕ್ಷರು ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ, ಗ್ರಾಪಂ ಆಡಳಿತದ ಜವಾಬ್ದಾರಿಯೂ ಇರುವ ಕಾರಣ ಪ್ರಚಾರ ಕಾರ್ಯ ಹಾಗೂ ಪ್ರಮುಖರೊಂದಿಗೆ ಸಭೆ ನಡೆಸುವಂತೆ ತಿಳಿಸಿದರು.

Edited By :
Kshetra Samachara

Kshetra Samachara

08/10/2020 03:53 pm

Cinque Terre

4.38 K

Cinque Terre

0

ಸಂಬಂಧಿತ ಸುದ್ದಿ