ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ
Video Player is loading.
Current Time 0:00
/
Duration 0:00
Loaded: 0%
0:00
Progress: 0%
Stream Type LIVE
Remaining Time -0:00
 
1x

ಪುತ್ತೂರು: 2023 ಕ್ಕೆ ಭಾರತದಲ್ಲಿ ಪೌರತ್ವ ತಿದ್ದುಪತಿ ಕಾಯ್ದೆ ಜಾರಿಗೆ--ಸನಾತನ ಸಂಸ್ಥೆ ವಿಶ್ವಾಸ

ಪುತ್ತೂರು: 2023 ರಲ್ಲಿ ಭಾರತದಲ್ಲಿ ಸಿಎಎ ಕಾನೂನು ಜಾರಿಗೆ ಬರಲಿದೆ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ್ ರಾಜ್ ಹಂಸ ವಿಶ್ವಾಸ ವ್ಯಕ್ತಪಡಿಸಿದರು.

ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸನಾತನ ಸಂಸ್ಥೆ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ 2023 ರ ಜನವರಿ ತಿಂಗಳಲ್ಲಿ ದೇಶದಲ್ಲಿ ಜಾರಿಯಾಗುವ ಎಲ್ಲಾ ಸಾಧ್ಯತೆಯಿದೆ. 2013 ರಲ್ಲೇ ಸನಾತನ ಸಂಸ್ಥೆ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ತರುವ ನಿರ್ಣಯವನ್ನು ತೆಗೆದುಕೊಂಡಿತ್ತು.

2014 ರಲ್ಲಿ ದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಇದನ್ನು ಕೈಗೆತ್ತಿಕೊಂಡಿದ್ದು, 2019 ರಂದು ದೇಶದಲ್ಲಿ ಈ ಕಾಯ್ದೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. ಈ ಕಾಯ್ದೆ ಅನುಷ್ಠಾನಕ್ಕೆಕ್ಕಾಗಿ ಎಲ್ಲಾ ರೀತಿಯಲ್ಲೂ ಫಾಲೋ-ಅಪ್ ಮಾಡುವ ಕೆಲಸವನ್ನು ಮಾಡುತ್ತಿದೆ. ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂದು ಸನಾತನ ಸಂಸ್ಥೆ ಕಾನೂನು ಹೋರಾಟವನ್ನು ಈಗಾಗಲೇ ಆರಂಭಿಸಿದೆ.

ಸಂವಿಧಾನದಲ್ಲಿ ಜಾತ್ಯಾತೀತ ಎನ್ನುವ ಶಬ್ದವನ್ನು ತಿದ್ದುಪಡಿ ಮಾಡದೆಯೇ ಅಳವಡಿಸಲಾಗಿತ್ತು. ಸನಾತನ ಸಂಸ್ಥೆ ಸುಪ್ರೀಕೋರ್ಟ್ ನಲ್ಲಿ ಈಗಾಗಲೇ ಅರ್ಜಿಯನ್ನು ಸಲ್ಲಿಸಲಾಗಿದ್ದು, ಈ ವಿಚಾರದಲ್ಲೂ ಸಕಾರಾತ್ಮಕ ತೀರ್ಪು ನಿರೀಕ್ಷಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

Edited By : PublicNext Desk
Kshetra Samachara

Kshetra Samachara

11/09/2022 02:38 pm

Cinque Terre

1.39 K

Cinque Terre

0

ಸಂಬಂಧಿತ ಸುದ್ದಿ