ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.
ವಿಕಾಸ್ ಕುಮಾರ್ ಅವರನ್ನು ರಾಜ್ಯ ರಿಸರ್ವ್ ಪೊಲೀಸ್ ನ ಡೆಪ್ಯುಟಿ ಇನ್ಸ್‌ಪೆಕ್ಟರ್ ಆಫ್ ಜನರಲ್ ಪೊಲೀಸ್ ಆಗಿ ಈ ತಕ್ಷಣದಿಂದಲೇ ನೇಮಕ ಮಾಡಿ ರಾಜ್ಯ ಸರಕಾರ ಆದೇಶಿಸಿದೆ. ಇದೀಗ ತೆರವಾದ ಸ್ಥಾನಕ್ಕೆ ಎನ್. ಶಶಿ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ವಿಕಾಸ್ ಕುಮಾರ್ ಅವರು 2020 ಜೂನ್ 29 ರಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು.
Kshetra Samachara
31/12/2020 08:29 pm