ಬಜಪೆಯಿಂದ ಕೈಕಂಬಕ್ಕೆ ಸಾಗುವಂತಹ ರಾಜ್ಯ ಹೆದ್ದಾರಿಯ ಕಿನ್ನಿಕಂಬಳ ಎಂಬಲ್ಲಿ ರಸ್ತೆಯ ಅಂಚಿನಲ್ಲಿ ರಾಶಿ ರಾಶಿ ಕಸವು ಸಂಗ್ರಹವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ರಸ್ತೆಯ ಅಂಚಿನಲ್ಲಿ ಕಸವು ಸಂಗ್ರಹವಾಗುತ್ತಲೇ ಇದ್ದರೂ ತೆರವುಗೊಳಿಸುವ ಕಾರ್ಯಕ್ಕೆ ಸಂಬಂಧಪಟ್ಟವರು ಮುಂದಾಗಲಿಲ್ಲ. ಇದೀಗ ರಾಶಿ ಬಿದ್ದ ಕಸದಿಂದ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ದುರ್ನಾತ ಬೀರುತ್ತಿದೆ.
ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಕಸ ಎಸೆಯುವವರ ವಿರುದ್ದ ಕ್ರಮವನ್ನು ತೆಗೆದುಕೊಳ್ಳುದರ ಜೊತೆಗೆ ದಂಡವನ್ನು ವಿಧಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.ಈ ಹಿಂದೆ ಬಜಪೆ ಸಮೀಪದ ಪಡು ಪೆರಾರ ಗ್ರಾಮ ಪಂಚಾಯತ್ ನಿಂದ ರಸ್ತೆಯಂಚಿನಲ್ಲಿ ಕಸ ಎಸೆದು ಹೋಗುವವರಿಗೆ ದಂಡವನ್ನು ವಿಧಿಸಿತ್ತು. ಇದೀಗ ಪಡು ಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಯಂಚಿನಲ್ಲಿ ಕಸದ ರಾಶಿಯು ಸ್ವಲ್ಪ ಕಡಿಮೆಯಾಗಿದೆ. ಇದೇ ರೀತಿಯ ಕಟ್ಟು ನಿಟ್ಟಾದ ಕ್ರಮವನ್ನು ಈ ಭಾಗಕ್ಕೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ನಿಂದಲೂ ಆಗಬೇಕಿದೆ ಎಂಬುದು ನಾಗರೀಕರ ಆಗ್ರಹವಾಗಿದೆ.
Kshetra Samachara
04/06/2022 01:21 pm