ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ದೀಪಾವಳಿ ಸಂಭ್ರಮ; ಅಸಹಾಯಕ ಕುಟುಂಬಗಳಿಗೆ ಸಹಾಯ ಹಸ್ತ

ಸುರತ್ಕಲ್:ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಮಂಗಳೂರು ನಗರ ಉತ್ತರ ಮಂಡಲ ವತಿಯಿಂದ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರ ನೇತೃತ್ವದಲ್ಲಿ ಸುರತ್ಕಲ್ ನಲ್ಲಿ ದೀಪಾವಳಿ ಸಂಭ್ರಮ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಈ ಸಂದರ್ಭ ಮಾತನಾಡಿದ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಈ ಕಾರ್ಯಕ್ರಮದಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ 22 ವಾರ್ಡಿನ, 13 ಗ್ರಾಮ ಪಂಚಾಯತ್ ನ ಅಸಹಾಯಕ ಕೆಲವು ಕುಟುಂಬಗಳಿಗೆ ಸಹಾಯ ಮಾಡುವ ಮೂಲಕ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಯುವಮೋರ್ಚಾ ಮುಂದಾಗಿದೆ ಎಂದು ಹೇಳಿದರು.

ಸಂಜೆ ನಡೆದ ಕಾರ್ಯಕ್ರಮದಲ್ಲಿ ಧನ ಸಹಾಯವನ್ನು ವಿತರಿಸಲಾಯಿತು.

ಗೂಡು ದೀಪ ಸ್ಪರ್ಧೆ ಮತ್ತು ಭಜನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡ ಬಿದ್ರೆ ಅವರು ಶಾಸಕ ಡಾ.ಭರತ್ ಶೆಟ್ಟಿ ವೈ ಮತ್ತು ಯುಮೋರ್ಚಾವು ಸಾಂಪ್ರದಾಯಿಕ ಮತ್ತು ಕೌಟುಂಬಿಕ ಆಚರಿಸುವ ದೀಪಾವಳಿಯ ಮಹತ್ವವನ್ನು ಸರ್ವರಿಗೂ ತಿಳಿಯುವಂತೆ ಮಾಡಿದ್ದಾರೆ.ಗೋ‌ಪೂಜೆ ಮೂಲಕ ನಮ್ಮ ನಡೆದಾಡುವ ಭಗಂತನ ಮಹತ್ವವನ್ನು ಸಾರಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮಂಡಲ‌ ಅಧ್ಯಕ್ಷರಾದ ತಿಲಕರಾಜ್ ಕೃಷ್ಣಾಪುರ, ಯುವ ಮೋರ್ಚಾ ಅಧ್ಯಕ್ಷರಾದ ಭರತರಾಜ್ ಕೃಷ್ಣಾಪುರ,ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಗುರುದತ್ ಕಾಮತ್,ಸುದರ್ಶನ್ ಬಜ, ಮುಖಂಡರಾದ ಯಶ್ ಪಾಲ್ ಸುವರ್ಣ,ರಣದೀಪ್ ಕಾಂಚನ್,ಗಣೇಶ್ ಹೊಸಬೆಟ್ಟು,ಕಸ್ತೂರಿ ಪಂಜ, ಮನಪಾ ಸದಸ್ಯರು, ಭಾಜಪಾ ಮುಖಂಡರು, ಕಾರ್ಯಕರ್ತರು, ಗಣ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

07/11/2021 12:26 pm

Cinque Terre

2.06 K

Cinque Terre

0