ಮುಲ್ಕಿ:ಕಿನ್ನಿಗೋಳಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಕಿನ್ನಿಗೋಳಿಯ ಮಹಮ್ಮಾಯಿ ಕಟ್ಟೆಯಲ್ಲಿ ಪ್ರತಿಷ್ತಾಪಿಸಲ್ಪಟ್ಟ ಆರನೇ ವರ್ಷದ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು. ಶನಿವಾರ ಮಧ್ಯಾಹ್ನ 3 ಗಂಟೆಗೆ ಅರ್ಚಕ ವೇದಮೂರ್ತಿ ಗಿರೀಶ್ ಭಟ್ ನೇತೃತ್ವದಲ್ಲಿ ವಿಸರ್ಜನಾ ಪೂಜೆ ನಡೆದು ಕಿನ್ನಿಗೋಳಿಯಿಂದ ಕಟೀಲು ವರೆಗೆ ವಿವಿಧ ಬಿರುದಾವಳಿಗಳೊಂದಿಗೆ ಶಾರದಾ ಮೂರ್ತಿಯ ವಿಸರ್ಜನಾ ಮೆರವಣಿಗೆಯ ಶೋಭಾಯಾತ್ರೆ ನಡೆಯಿತು.
ಪ್ರತಿದಿನ ಸಹಸ್ರಾರು ರಂಗಪೂಜೆ ಹೂವಿನ ಪೂಜೆ ನಡೆಯಿತು. ಈ ಸಂದರ್ಭ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಣೈ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
16/10/2021 09:32 pm