ಸುರತ್ಕಲ್: ಮುಕ್ಕ ಮೆಸ್ಕಾಂ ವತಿಯಿಂದ ಆಯುಧ ಪೂಜೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಿಸುವ ಕಾರ್ಯಕ್ರಮ ಮುಕ್ಕ ಸಿಂಧೂರ ಕಾಂಪ್ಲೆಕ್ಸ್ ಬಳಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉದ್ಯಮಿ ರಾಮಚಂದ್ರ ಭಟ್ ಮಾತನಾಡಿ ಮುಕ್ಕ ಮೆಸ್ಕಾಂ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ವಾಗಿದ್ದು ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.
ಸುರತ್ಕಲ್ ಪುರಸಭೆಯ .ಮಾಜೀ ಸದಸ್ಯ ಅಕ್ಬರ್ ಮಾತನಾಡಿ ವಿದ್ಯಾರ್ಥಿಗಳು ದೇಶದ ಬೆನ್ನೆಲುಬಾಗಿದ್ದು ಶಿಕ್ಷಣದ ಮೂಲಕ ಸಾಧನೆ ಅಭಿನಂದನೀಯ ಎಂದರು.
ಕೂಳೂರು ಮೆಸ್ಕಾಂ ಶಾಖೆಯ ಅಸಿಸ್ಟೆಂಟ್ ಇಂಜಿನಿಯರ್ ಸಂತೋಷ್, ಉದ್ಯಮಿ ಮೊಹಮ್ಮದ್ ಅಸ್ಲಾಂ, ಅರಂದ್ ನಂದಿನಿ ಕ್ರಿಕೆಟರ್ಸ್ ಅಧ್ಯಕ್ಷ ಪುರುಷೋತ್ತಮ ದೇವಾಡಿಗ, ಮುಕ್ಕ ಮೆಸ್ಕಾಂ ನ ಶಾಖಾಧಿಕಾರಿ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮುಕ್ಕ ಪರಿಸರದ ಸುಮಾರು 30 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಿವರಾಮ್ ನಿರೂಪಿಸಿದರು.
Kshetra Samachara
30/09/2022 02:16 pm