ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್:"ಮಕ್ಕಳಲ್ಲಿ ಆತ್ಮಸ್ಥೈರ್ಯದ ಜೊತೆಗೆ ಗುರುವಿನ ಮಾರ್ಗದರ್ಶನ ದೊರೆತಲ್ಲಿ ಜೀವನದಲ್ಲಿ ಯಶಸ್ಸು ಸಾಧ್ಯ"

ಸುರತ್ಕಲ್: ಮಕ್ಕಳಲ್ಲಿ ಆತ್ಮಸ್ಥೈರ್ಯದ ಜೊತೆಗೆ ಗುರುವಿನ ಮಾರ್ಗದರ್ಶನ ದೊರೆತಲ್ಲಿ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಉದ್ಯಮಿ ಅಗರಿ ರಾಘವೇಂದ್ರ ರಾವ್ ಹೇಳಿದರು.

ಸುರತ್ಕಲ್ ಗೋವಿಂದದಾಸ ಪದವಿ ಪೂರ್ವಕಾಲೇಜಿನಲ್ಲಿ ಜರಗಿದ ಕಾಲೇಜಿನ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕಾಲೇಜಿನ ಆಡಳಿತ ನಿರ್ದೇಶಕರು ಹಾಗೂ ಹಿಂದೂ ವಿದ್ಯಾದಾಯಿನೀ ಸಂಘದ ಉಪಾಧ್ಯಕ್ಷ ವೈ ವಿ ರತ್ನಾಕರ್‌ರಾವ್, ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ.ಲಕ್ಷ್ಮೀ ಪಿ, ಉಪಪ್ರಾಂಶುಪಾಲೆ ಸುನೀತಾ ಕೆ, ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷ .ಗಂಗಾಧರ ಕೆ, ಕಾರ್ಯದರ್ಶಿ ಶ್ರೀಮತಿ. ದೀಪ್ತಿ ಶೆಟಿ, ವಿದ್ಯಾರ್ಥಿಕ್ಷೇಮಪಾಲಕಿ ಶ್ರೀಮತಿ. ಪಲ್ಲವಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೃಂದ ಮತ್ತು ಶಿಕ್ಷಕ ಸಂಘದ ಪಧಾಧಿಕಾರಿಗಳು ಅಧ್ಯಾಪಕ ವೃಂದ ಮತ್ತುಅಧ್ಯಾಪಕೇತರ ವೃಂದದವರನ್ನು ಸಮ್ಮಾನಿಸಿದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ತಾರಾ ಆಶೋಕ್ ಸ್ವಾಗತಿಸಿದರು. ಪೈಕ ವೆಂಕಟರಮಣ ವಂದಿಸಿದರು.ವಿದ್ಯಾರ್ಥಿಗಳಾದ ಶಶಾಂಕ್, ತೇಜಸ್ವಿನಿ, ಜಿಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

12/09/2022 07:53 pm

Cinque Terre

1.21 K

Cinque Terre

0

ಸಂಬಂಧಿತ ಸುದ್ದಿ