ಮುಲ್ಕಿ :ಮಕ್ಕಳ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಪ್ರತಿಭಾ ಕಾರಂಜಿಯಂತಹ ವೇದಿಕೆಯ ಪೂರಕವಾಗಿದ್ದು ಪ್ರೋತ್ಸಾಹ ನೀಡುವ ಕಾರ್ಯವಾಗಬೇಕೆಂದು ಮಂಗಳೂರು ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಪೀತಾಂಬರ್ ಹೇಳಿದರು.
ಪಕ್ಷಿಕೆರೆ ಸಮೀಪದ ಕೊಯಿಕುಡೆ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಮಂಗಳೂರು ಉತ್ತರ ವಲಯ ಪಡು ಪಣಂಬೂರು ಕ್ಲಸ್ಟರ್ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ಎರಡು ವರ್ಷಗಳಲ್ಲಿ ಕೊವಿಡ್ ನಿಂದಾಗಿ ಮಕ್ಕಳ ಪoತರ ಚಟುವಟಿಕೆಗಳು ನಿಂತು ಸಮಸ್ಯೆಯಾಗಿದ್ದು ಇದೀಗ ಮಕ್ಕಳ ಪ್ರತಿಭೆ ಅನಾವರಣಕ್ಕೆ ಅವಕಾಶ ಕೊಟ್ಟಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭ ಕಥೆ ಹೇಳುವ ಸ್ಪರ್ಧೆ ಚಿತ್ರ ಬಿಡಿಸುವ ಸ್ಪರ್ಧೆ ಅಭಿನಯ ಗೀತೆ ಸ್ಪರ್ಧೆಗಳು ಹಾಸ್ಯ ಸ್ಪರ್ಧೆ ಮಣ್ಣಿನಿಂದ ತಯಾರಿಸಿದ ಕಲಾ ಕೃತಿಗಳು ಹಾಗೂ ಇನ್ನಿತರ ಸ್ಪರ್ಧೆಗಳು ನಡೆಯಿತು.
ತಾ ಪಂ ಮಾಜೀ ಅಧ್ಯಕ್ಷೆ ವಜ್ರಾಕ್ಷಿ ,ಗ್ರಾ ಪಂ ಸದಸ್ಯರಾದ ಅಮೃತ ,ಬಿ ಆರ್ ಪಿ ಹರಿಪ್ರಸಾದ್ ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷ ಜಯರಾಮ್, ಕೆಮ್ರಾಲ್ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಅಜ್ಜಯ್ಯ , ಎಸ್ ಟಿ ಎಂ ಸಿ ಅಧ್ಯಕ್ಷೆ ಯಶೋಧ, ಪಡುಪಣಂಬರು ಕ್ಲಸ್ಟರ್ ಸಿ ಆರ್ ಪಿ ಜ್ಯೋತಿ, ಮುಲ್ಕಿ ಕ್ಲಸ್ಟರ್ ಸಿ ಆರ್ ಪಿ ವಿವಿಲಾ, ಸಹ ಶಿಕ್ಷಕರ ಶಿಕ್ಷಕ್ಷಿಯರಾದ ವಿನೋದ , ಮಹಮಾಯ ಹಾಗೂ ಶ್ರೀಮತಿ ಜಯಲಕ್ಷ್ಮಿ, ಪಂಜ ಶಾಲೆಯ ಶಿಕ್ಷಕಿ ಐರಿನ್, ಕೆಮ್ರಾಲ್ ಶಾಲೆಯ ಶಿಕ್ಷಕಿ ಪುಷ್ಪಲತಾ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ವೀಣಾ ಕುಮಾರಿಯವರು ಸ್ವಾಗತಿಸಿ, ಪ್ರಸ್ತಾವನೆಗೈದರು, ಆರ್ ಪಿ ಜ್ಯೋತಿ ವಂದಿಸಿದರು.
Kshetra Samachara
26/08/2022 02:40 pm