ಮುಲ್ಕಿ: ಹಳೆವಿದ್ಯಾರ್ಥಿ ಸಂಘ ಮತ್ತು ದಾನಿಗಳ ಸಹಕಾರದಿಂದ ಸರಕಾರಿ ಶಾಲೆ ಇಂದು ಖಾಸಗಿ ಶಾಲೆಗಳಿಗೆ ಸಮನಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಗುತ್ತಕಾಡು ನಡೆದ ದಾನಿಗಳಿಂದ ನೀಡಿದ ಕಂಪ್ಯೂಟರ್, ಕಾಪಾಟ್, ಸ್ಟೀಲ್ ಬಟ್ಟಲ್ ಮತ್ತಿತರರು ನೀಡಿದ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.
ಐಡಿಯಲ್ ಐಸ್ ಕ್ರೀಮ್ ನ ಸುಧೀರ್ ಭಂಡಾರ್ಕರ್ ಕರ್ಣಾಟಕ ಬ್ಯಾಂಕ್ ನ ಹಿರಿಯ ಪ್ರಭಂಧಕ ಶ್ರೀನಿವಾಸ ದೇಶಪಾಂಡೆ, ಕರ್ನಾಟಕ ಬ್ಯಾಂಕ್ ನ ಮೂರುಕಾವೇರಿ ಶಾಖೆಯ ಅಂದ್ರದೆ, ತಾಲೂಕು ಪಂಚಾಯತ್ ಮಾಜಿ ಸದಸ್ಯ ದಿವಾಕರ ಕರ್ಕೇರ, ಅಭಿಷೇಕ್ ಶಾಲಾ ಸಲಹೆಗಾರ ಪ್ರಮೋದ್ ಕಿನ್ನಿಗೋಳಿ, ಚಂದ್ರಶೇಖರ್, ಮೂಕಾಂಬಿಕ ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ, ಎಸ್.ಡಿ.ಎಂ ಸಿ ಅಧ್ಯಕ್ಷ ಅಬ್ದುಲ್ ಖಾದರ್, ಮಾಜಿ ಅಧ್ಯಕ್ಷ ನಜೀರ್, ಶಾಲಾ ಸಮಿತಿಯ ಸನಂದ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಡಯಾನಾ ಪೆರಾವೋ ಸ್ವಾಗತಿಸಿ ತನುಜ ಧನ್ಯವಾದ ಸಮರ್ಪಿಸಿದರು, ಅನುರಾಧ ನಿರೂಪಿಸಿದರು.
Kshetra Samachara
20/08/2022 06:46 pm