ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು, ಎಸ್.ಸಿ, ಎಸ್.ಟಿ ಕೋಶದ ಮತ್ತು ಒಬಿಸಿ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದ ವಿದ್ಯಾರ್ಥಿ ವೇತನದ ಪ್ರಯೋಜನಗಳು ಮತ್ತು ಇತರ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಯೋಗೀಶ್ವರಿ, ದಿವ್ಯ ಸೇವಾಸಿಂಧು ಕೇಂದ್ರ ಕಲ್ಲಮುಂಡ್ಕೂರು ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ, ಕಟ್ಟಡ ಕಾರ್ಮಿಕರ ವಿದ್ಯಾರ್ಥಿ ವೇತನ, ಎಸ್.ಎಸ್.ಪಿ ವಿದ್ಯಾರ್ಥಿ ವೇತನ, ಎನ್.ಎಸ್.ಪಿ, ಸೀತಾರಾಮ್ ಜಿಂದಾಲ್ ಮತ್ತು ಎಂ.ಎಚ್.ಆರ್.ಡಿ.ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ನೀಡಿದರು.
ಪ್ರಾಂಶುಪಾಲ ಡಾ. ಕೃಷ್ಣ ಉಪಸ್ಥಿತರಿದ್ದರು. ಶರಣ್ ಡಿ. ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸೌಮ್ಯರವರು ಸ್ವಾಗತಿಸಿದರು, ಭವಾನಿ ಧನ್ಯವಾದ ನೀಡಿದರು.
Kshetra Samachara
16/08/2022 08:56 pm