ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮರುಮೌಲ್ಯಮಾಪನ;ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಶಾಲೆ ಎಸೆಸೆಲ್ಸಿ ಶೇಕಡಾ 100 ಫಲಿತಾಂಶ

ಮುಲ್ಕಿ: ಕಿಲ್ಪಾಡಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯು , ಕಿಲ್ಪಾಡಿ ಮುಲ್ಕಿ ಶಾಲೆಯ ವಿದ್ಯಾರ್ಥಿಯಾದ ವಿಷ್ಣು , 2021-22 ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಮಾಜ ವಿಜ್ಞಾನ ಹಾಗೂ ತೃತೀಯ ಭಾಷೆ ಹಿಂದಿ ವಿಷಯದಲ್ಲಿ ತಲಾ 79 ಅಂಕ ಪಡೆದು ಒಟ್ಟು 625 ರಲ್ಲಿ 623 ಅಂಕ ಪಡೆದಿದ್ದರು.

ಈಗ ನಡೆದ ಮರುಮೌಲ್ಯಮಾಪನದ ಬಳಿಕ ಎಲ್ಲ ವಿಷಯಗಳಲ್ಲಿ ಪೂರ್ತಿ ಅಂಕಗಳನ್ನು ಪಡೆದು 625ರಲ್ಲಿ 625 ಅಂಕ ಪಡೆದಿದ್ದಾರೆ.ಶಾಲೆಯ ಮೊದಲ ಫಲಿತಾಂಶದಲ್ಲಿ 101 ವಿದ್ಯಾರ್ಥಿಗಳಲ್ಲಿ 100 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು.

ಮರುಮೌಲ್ಯಮಾಪನದ ಬಳಿಕ ಅನುತ್ತೀರ್ಣಗೊಂಡ ವಿದ್ಯಾರ್ಥಿ ಉತ್ತೀರ್ಣ ಗೊಂಡು ಶಾಲಾ ಪಲಿತಾಂಶ 100% ಆಗಿರುತ್ತದೆ ಎಂದು ಶಾಲಾ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

08/06/2022 08:19 pm

Cinque Terre

2.12 K

Cinque Terre

0

ಸಂಬಂಧಿತ ಸುದ್ದಿ