ಮುಲ್ಕಿ:ಒಂಬತ್ತು ಮಾಗಣೆ ಕೊಲಕಾಡಿ ಶ್ರೀ ಕಾಳಿಕಾಂಬ ದೇವಸ್ಥಾನದ ಅಂಗ ಸಂಸ್ಥೆಯಾದ ವಿಶ್ವಬ್ರಾಹ್ಮಣ ಯುವಕ ವಿದ್ಯಾರ್ಥಿ ನಿಧಿಯ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಪುಸ್ತಕ ವಿತರಣೆ ನಡೆಯಿತು.
ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಸುಧಾಕರ ಆಚಾರ್ಯ ಕೊಲಕಾಡಿ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಎಸ್ಎಸ್ಎಲ್ಸಿ ಪ್ರತಿಭಾನ್ವಿತ ವಿದ್ಯಾರ್ಥಿ ಅನ್ವಿತ್ ಜೆ ಆಚಾರ್ಯ ರವರನ್ನು ಪ್ರತಿಭಾ ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. 150 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಲಕರಣೆ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಕೆ.ಸುಬ್ರಾಯ ಆಚಾರ್ಯ, ಜೈ ಜಗದಂಬಾ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರಶಾಂತ ಆಚಾರ್ಯ,ಯುವಕವೃಂದದ ಅಧ್ಯಕ್ಷ ಶರತ್ ಆಚಾರ್ಯ. ಮಹಿಳಾ ಬಳಗದ ಅಧ್ಯಕ್ಷೆ ಪ್ರೇಮಾ ಸುಧಾಕರ ಆಚಾರ್ಯ ಹಾಗೂ ಸಮಾಜಭಾಂಧವರು ಭಾಗವಹಿಸಿದರು. ಶ್ವೇತಾ ವೇಣುಗೋಪಾಲ ಆಚಾರ್ಯ ಪ್ರಾರ್ಥಿಸಿದರು ಶರತ್ ಆಚಾರ್ಯ ಸ್ವಾಗತಿಸಿದರು, ಶ್ರಾವ್ಯ ಆಚಾರ್ಯ ನಿರೂಪಿಸಿದರು,ಕಿಶೋರ್ ಆಚಾರ್ಯ ವಂದಿಸಿದರು.
Kshetra Samachara
06/06/2022 06:13 pm