ಸುರತ್ಕಲ್: ಫ್ರೆಂಡ್ಸ್ ಸುರತ್ಕಲ್, ತುಳುನಾಡ ಬಿರುವೆರ್(ರಿ.) ವತಿಯಿಂದ 3ನೇ ವರ್ಷದ ಶಾಲಾ ಮಕ್ಕಳ ಉಚಿತ ಪುಸ್ತಕ ವಿತರಣಾ ಸಮಾರಂಭ ಕುಳಾಯಿ ವೆಂಕಟ್ರಮಣ ಶಾಲೆಯಲ್ಲಿ ನಡೆಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಾರ್ಪೊರೇಟರ್ ವರುಣ್ ಚೌಟ ಮಾತನಾಡಿ "ದಾನಗಳಲ್ಲಿ ದೊಡ್ಡ ದಾನ ವಿದ್ಯಾದಾನ. ವಿದ್ಯೆಗೆ ಬೇಕಿರುವ ಸಹಕಾರ ನೀಡುವುದು, ಬಡಮಕ್ಕಳಿಗೆ ನೆರವಾಗುವುದು ಶ್ರೇಷ್ಠವಾದ ಸೇವೆ. ತುಳುನಾಡ ಬಿರುವೆರ್ ಸಂಘಟನೆ ಈ ಕೆಲಸ ಮಾಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಉದ್ಯಮಿ ಸತೀಶ್ ಮುಂಚೂರು, ಫ್ರೆಂಡ್ಸ್ ಸುರತ್ಕಲ್ ಗೌರವಾಧ್ಯಕ್ಷ ಉದ್ಯಮಿ ಮಹಾಬಲ ಪೂಜಾರಿ ಕಡಂಬೋಡಿ, ಸ್ಥಾಪಕಾಧ್ಯಕ್ಷ ಲೋಕೇಶ್ ಕೋಡಿಕೆರೆ, ಅಧ್ಯಕ್ಷ ವಿಶ್ವನಾಥ್ ಕೋಡಿಕೆರೆ, ಸಿಟಿ ಕ್ಯಾಟರರ್ಸ್ ಮಾಲಕ ವಿಜಯ ಕುಮಾರ್ ಕೆಂಜಾರ್, ಕಾರ್ಪೋರೇಟರ್ ವರುಣ್ ಚೌಟ, ರೋಹಿತ್ ಆಕಾಶ್ ಭವನ, ದಿನೇಶ್ ಶೆಟ್ಟಿ ಕಲ್ಯ, ಮುಖ್ಯ ಶಿಕ್ಷಕಿ ಜಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುಷ್ಪರಾಜ್ ಕುಳಾಯಿ ಅತಿಥಿಗಳನ್ನು ಸ್ವಾಗತಿಸಿದರು.ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ಅತಿಥಿಗಳು ಪುಸ್ತಕ ವಿತರಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 624 ಅಂಕಗಳನ್ನು ಪಡೆದ ಕುಮಾರಿ ಯಶ್ಮಿತಾ ರವರನ್ನು ಗೌರವಿಸಲಾಯಿತು.
Kshetra Samachara
21/05/2022 01:24 pm