ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ಮುಂಚಿಕಾಡು ಮಂತ್ರ ದೇವತಾ ಸೇವಾ ಸಮಿತಿಯ ಆಶ್ರಯದಲ್ಲಿ ಜರಗಿದ ಸಾರ್ವಜನಿಕ ಶನಿ ಪೂಜೆ ಸಂದರ್ಭ ನಡೆದ ಧಾರ್ಮಿಕ ಹಾಗೂ ಸಾಧಕರಿಗೆ ಗೌರರ್ಪಾಣೆ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಕ್ಷಿತಾ ಪೂಜಾರಿ, ಕ್ರೀಡಾ ಕ್ಷೇತ್ರದ ಸಾಧಕಿ ದಿಶಾ ಕುಕ್ಯಾನ್ ರನ್ನು ಗೌರವಿಸಲಾಯಿತು.
ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಗುಣಾ, ಗ್ರಾಮ ಪಂಚಾಯತ್ ಸದಸ್ಯರಾದ ಚೇತನ್ ಶೆಟ್ಟಿ ದಯೇಶ್ ಐಕಳ , ಮಾಜಿ ಗ್ರಾ. ಪಂ ಯೋಗೀಶ್ ಕೋಟ್ಯಾನ್, ಸಮಿತಿಯ ಜಗನ್ನಾಥ್, ಉದ್ಯಮಿ ಪ್ರದೀಪ್, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/04/2022 02:20 pm