ಮುಲ್ಕಿ: ಕಿನ್ನಿಗೋಳಿ ಸಮೀಪದ ಎಳತ್ತೂರು ಮಾತೃಭೂಮಿ ಫ್ರೆಂಡ್ಸ್ ಕ್ಲಬ್ ನೆಲಗುಡ್ಡೆ (ರಿ) ವತಿಯಿಂದ ಪ್ರಥಮ ವರ್ಷದ ವಿದ್ಯಾ ನಿಧಿಯ ಪ್ರಯುಕ್ತ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನೆಲಗುಡ್ಡೆ ಬಳಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಅತಿಕಾರಿಬೆಟ್ಟು ಗುತ್ತಿನಾರ್ ದೆಪ್ಪುಣಿ ಗುತ್ತು ಸುಧಾಕರ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವ ಸಂಘಟನೆಗಳ ಕಾರ್ಯ ಅಭಿನಂದನೀಯ. ವಿದ್ಯಾರ್ಥಿಗಳು ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದರು.
ಅಧ್ಯಕ್ಷತೆಯನ್ನು ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ ಕೋಟ್ಯಾನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜೀ ತಾಪಂ ಸದಸ್ಯ ದಿವಾಕರ ಕರ್ಕೇರ, ಮಾಜೀ ಪಂ. ಸದಸ್ಯ ಪ್ರಕಾಶ್ ಹೆಗ್ಡೆ, ರಾಜ್ಯ ರಾಮ ಸೇನಾ ಪ್ರಮುಖ್ ಕಿರಣ್ ಅಮೀನ್ ಊರ್ವ ಸ್ಟೋರ್,ನೆಲಗುಡ್ಡೆ ಅಂಗನವಾಡಿ ಕಾರ್ಯಕರ್ತೆ ಲೀಲಾ ಕೆ.ಎಳತ್ತೂರು ಮಾತೃಭೂಮಿ ಫ್ರೆಂಡ್ಸ್ ಕ್ಲಬ್ ನೆಲಗುಡ್ಡೆ (ರಿ)ನ ಅಧ್ಯಕ್ಷ ಹರೀಶ್ ಸಾಲ್ಯಾನ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು.
Kshetra Samachara
11/04/2022 07:30 am