ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರಂಬಾರು: "ಸರಕಾರಿ ಶಾಲೆ ಉಳಿಸುವಲ್ಲಿ ಹಳೆವಿದ್ಯಾರ್ಥಿ ಸಂಘದ ಕಾರ್ಯ ಶ್ಲಾಘನೀಯ": ಉಮಾನಾಥ್ ಕೋಟ್ಯಾನ್

ಕರಂಬಾರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಾತ್ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ತೃತೀಯ ವಾರ್ಷಿಕೋತ್ಸವ ಶಾಲಾ ಆವರಣದಲ್ಲಿ ನಡೆಯಿತು.

ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಉಮಾನಾಥ ಕೋಟ್ಯಾನ್,ಸರ್ಕಾರಿ ಶಾಲೆ ಉಳಿಸುವಲ್ಲಿಹಳೇ ವಿದ್ಯಾರ್ಥಿಸಂಘದ ಕಾರ್ಯವನ್ನು ಶ್ಲಾಘಿಸಿ, ಅಬಿನಂದಿಸಿದರು. 4 ವರ್ಷಗಳ ಹಿಂದೆ ಕೇವಲ 50 ಮಕ್ಕಳಿದ್ದ ಶಾಲೆಯಲ್ಲಿ ಹಳೇ

ವಿದ್ಯಾರ್ಥಿ ಸಂಘದ ಮುತುವರ್ಜಿಯಿಂದ ಎಲ್‍ಕೆಜಿ ಯುಕೆಜಿ ಆರಂಭವಾಗಿ ಇಂದು 250 ವಿದ್ಯಾರ್ಥಿಗಳಿದ್ದಾರೆ. ಶಾಲೆಗೆ ಬೇಕಾದ ಎಲ್ಲಾ ಮೂಲಸೌಕರ್ಯ ಒದಗಿಸಲು ಸಿದ್ಧಎಂದರು.

ಅದ್ಯಕ್ಷತೆ ವಹಿಸಿದ್ದ ಹಳೇ ವಿದ್ಯಾರ್ಥಿ ಸಂಘದ ಅದ್ಯಕ್ಷ ಸತೀಶ್ ದೇವಾಡಿಗ ,ಏಪ್ರಿಲ್ ತಿಂಗಳಿನಲ್ಲಿ ಶಾಲೆಯ ಹೊಸ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಲಿ. ಸರ್ಕಾರಿ ಶಾಲೆ ಉಳಿಸಿ ಬೆಳಿಸಿ ಮುನ್ನಡೆಸುವ ಕಾರ್ಯ ಯೋಜನೆಯನ್ನು ಗಟ್ಟಿಗೊಳಿಸುವುದಾಗಿ ತಿಳಿಸಿದರು. ಶಾಲೆಯಿಂದ ವರ್ಗಾವಣೆಗೊಂಡು ಬೈಕಂಪಾಡಿ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿಯಾಗಿ ನೇಮಕಗೊಂಡ, ಹಳೇ ವಿದ್ಯಾರ್ಥಿ ಸಂಘದ ಸಂಸ್ಥಾಪಕಿ ಚಂದ್ರಾಕಲಾ ಎ. ರವರನ್ನು ಗೌರವಿಸಲಾಯಿತು ಶ್ರೀದೇವಿ ಗೇಮ್ಸ್ ಕ್ಲಬ್ ಕೆಂಜಾರು-ಕರಂಬಾರು ವತಿಯಿಂದ 1 ಲಕ್ಷ ರೂ.ಮೊತ್ತದ ನಿರಖು ಟೇವಣಿಯನ್ನು ದಿ.ನಿಸಾರ್ ಅಹಮದ್ ಹೆಸರಿನಲ್ಲಿ ಕ್ಲಬ್‍ನ ಅದ್ಯಕ್ಷ ಪಾಂಡುರಂಗ ಪ್ರಭುರವರು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಘವೇಂದ್ರ, ಮಳವೂರು ಗ್ರಾಪಂ ಮಾಜಿ ಅಧ್ಯಕ್ಷ ರಾಜೇಶ್ ಅರ್ಬಿ, ನವಮಂಗಳೂರು ಬಂದರು ಎಚ್‍ಎಂಎಸ್ ಯೂನಿಯನ್ ಉಪಾದ್ಯಕ್ಷ ಪಿ.ಟಿ.ಕೃಷ್ಣಪ್ಪ, ಕರಂಬಾರು ಮಾರಿಯಮ್ಮ ಕೋಟೆ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷ ಜಗನ್ನಾಥ ಸಾಲ್ಯಾನ್, ಬಜ್ಪೆ ಉದ್ಯಮಿ ಕೃಷ್ಣ ಕಲ್ಲೋಡಿ , ಶಾಲಾ ಮುಖ್ಯಶಿಕ್ಷಕಿ ಉಷಾಕಿರಣ ಉಪಸ್ತಿತರಿದ್ದರು. ರಾಕೇಶ್ ಕುಂದರ್ ಮತ್ತುಪವಿತ್ರ ಪ್ರಕಾಶ್ ಸ್ವಾಗತಿಸಿದರು.ಕೃಷ್ಣಾನಂದ ಡಿ.ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥ ದೇವಾಡಿಗ ವಂದಿಸಿದರು. ಗೀತಾ ಎಸ್.ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

08/03/2022 07:41 pm

Cinque Terre

1.45 K

Cinque Terre

0

ಸಂಬಂಧಿತ ಸುದ್ದಿ