ಮುಲ್ಕಿ: ಮುಲ್ಕಿ ಸಮೀಪದ ಕಾರ್ನಾಡು ಶ್ರೀ ರಾಮ ಸೇವಾ ಮಂಡಳಿ ಆಶ್ರಯದಲ್ಲಿ ಕೆಂಚನಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಟರ್ ಫಿಲ್ಟರ್ ಮತ್ತು ಶಾಲೆಯ ನಾಮಪಲಕ ಉದ್ಘಾಟನಾ ಸಮಾರಂಭವು ಮಂಡಳಿ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್ ರವರ ಅಧ್ಯಕ್ಷತೆಯಲ್ಲಿ ಶಾಲಾ ವಠಾರದಲ್ಲಿ ನಡೆಯಿತು.
ಈ ಸಂದರ್ಭ ಅವರು ಮಾತನಾಡಿ ಇಂದಿನ ಸರಕಾರಿ ಶಾಲೆಗಳಿಗೆ ಸರಕಾರ ಹಾಗೂ ವಿವಿಧ ಸಂಘ-ಸಂಸ್ಥೆಗಳು ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದ್ದು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ಜಯಂತಿ, ಶಿಕ್ಷಕಿ ಸುಮನ, ಅಂಗನವಾಡಿ ಕಾರ್ಯಕರ್ತೆ ಜಯಶ್ರೀ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಗುಣವತಿ,ಉಪಾಧ್ಯಕ್ಷೆ ಸುಮತಿ ಮತ್ತು ಯೋಗ ಗುರು ಜಯ ಮುದ್ದು ಶೆಟ್ಟಿ,ರೊ.ಅಶೋಕ್ ಕುಮಾರ್ ಶೆಟ್ಟಿ, ಜೇಸಿಐ ಅಧ್ಯಕ್ಷ ಕಲ್ಲಪ, ಜೇಸಿಐ ದಿನೇಶ್ ಶೆಟ್ಟಿ,ಜೇಸಿಐ ವೆಂಕಟೇಶ್ ಹೆಬ್ಬಾರ್, ಲಯನ್ಸ್ ಪ್ರತಿಭಾ ಹೆಬ್ಬಾರ್, ಜಯರಾಂ ಪುನರೂರ್,ನಗರ ಪಂಚಾಯತ್ ಸದಸ್ಯ ನರಸಿಂಹ ಮತ್ತು ಸದಸ್ಯರುಗಳಾದ ಕೇಶವ್ ಸುವರ್ಣ, ಶಿವಾನಂದ,ಮಾಧವ್ ಪೂಜಾರಿ,ಗಣೇಶ್ ಭಂಡಾರಿ ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.
Kshetra Samachara
18/01/2022 11:50 am