ಮುಲ್ಕಿ: ರಾಷ್ಟ್ರ ವ್ಯಾಪ್ತಿ ಹಬ್ಬಿಕೊಂಡಿದ್ದ ಕೊರೊನಾ ಎಂಬ ಮಹಾಮಾರಿ ಸಾಂಕ್ರಾಮಿಕ ವೈರಸ್ ಗಳಿಂದ ಅಂಗನವಾಡಿ ಕೇಂದ್ರಗಳು ಮತ್ತೆ ಇಂದಿನಿಂದ ಪ್ರಾರಂಭಗೊಂಡಿದ್ದು, ಕಿನ್ನಿಗೋಳಿ ಸಮೀಪದ ಶಾಂತಿಪಲ್ಕೆಯ ಅಂಗನವಾಡಿ ಕೇಂದ್ರದಲ್ಲಿ ಪುಟಾಣಿ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಲಾಯಿತು.
ಕಿನ್ನಿಗೋಳಿಯ ಉದ್ಯಮಿ ಪ್ರದೀಪ್ ಕುಮಾರ್ ಅವರು ಪುಟಾಣಿ ಮಕ್ಕಳಿಗೆ ಕೊಡಮಾಡಿದ ಬ್ಯಾಗ್, ಸ್ಲೇಟ್ ಕಡ್ಡಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಂಗನವಾಡಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಸುನೀತಾ, ಕಿನ್ನಿಗೋಳಿ ಗ್ರಾ ಪಂ.ಮಾಜಿ ಸದಸ್ಯರಾದ ಸಂತಾನ್ ಡಿಸೋಜ, ಸಂತೋಷ್ ಕುಮಾರ್,ಕೆಮ್ರಾಲ್ ಆಸ್ಪತ್ರೆಯ ಕಿರಿಯ ಆರೋಗ್ಯ ಕಾರ್ಯಕರ್ತೆ ಸುಧಾ, ಪ್ರೇಮಾ ಆಚಾರ್ಯ, ಅಂಗನವಾಡಿ ಕಾರ್ಯಕರ್ತೆ ಪ್ರೇಮಾ, ಸಹಾಯಕಿ ಪುಷ್ಪ, ಆಶಾ ಕಾರ್ಯಕರ್ತೆ ಶರ್ಮೀಳಾ, ಸತ್ಯಾನಂದ ಅಮೀನ್,ಲಕ್ಮಣ್, ದಿನೇಶ್ ಪೂಜಾರಿ ಹಾಗೂ ಮಕ್ಕಳ ಹೆತ್ತವರು ಉಪಸ್ಥಿತರಿದ್ದರು.
Kshetra Samachara
08/11/2021 05:51 pm