ಮೂಡುಬಿದಿರೆ: ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ತಮ್ಮನ್ನು ಉತ್ತಮ ಬರಹಗಾರರಾಗಿ, ಸಂವಹನಕಾರರಾಗಿ ರೂಪುಗೊಳಿಸಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮ ವಿಭಾಗದ ಆಳ್ವಾಸ್ ಮುೃದಮ್-ಪಾಡ್‍ಕಾಸ್ಟ್‍ನ ಮೊದಲ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಆಳ್ವಾಸ್ ವಿಶನ್ ಪ್ರಾಯೋಗಿಕ ಪತ್ರಿಕೆ ಹಾಗೂ ಸುದ್ದಿಮನೆ ಭಿತ್ತಿ ಬರಹದ ವಿಶೇಷ ಸಂಚಿಕೆಗಳನ್ನು ಹೊರತರಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಪದವಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ರೇಷ್ಮಾ ಉದಯ್ ಕುಮಾರ್, ಮಾನವಿಕ ವಿಭಾಗದ ಡೀನ್ ಪ್ರೊ. ಸಂಧ್ಯಾ ಕೆ.ಎಸ್. , ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಚಾಲಕ ಪ್ರಸಾದ್ ಶೆಟ್ಟಿ, ಉಪನ್ಯಾಸಕಿ ರಕ್ಷಿತಾ ತೋಡಾರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮರಿಯಮ್ ಹಾಗೂ ಫಾತಿಮ ಮುಸ್ಕಾನ್ ನಿರೂಪಿಸಿದರು.
Kshetra Samachara
27/01/2021 08:28 pm