ಮುಲ್ಕಿ: ಸುರತ್ಕಲ್ ಸಮೀಪದ ಮಧ್ಯ ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು.
ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಕೊರೊನಾ ಮುನ್ನೆಚರಿಕೆ ಕ್ರಮವಾಗಿ ಶಾಲೆಗೆ ತಾಪಂ ಸದಸ್ಯರಾದ ವಜ್ರಾಕ್ಷಿ ಪ್ರಭಾಕರ ಶೆಟ್ಟಿ ಕೊಡ ಮಾಡಿದ ಥರ್ಮಲ್ ಸ್ಕ್ಯಾನರ್ ಮಿಷನ್ ನ್ನು ಶಾಲಾ ಮುಖ್ಯ ಶಿಕ್ಷಕಿ ಕುಸುಮಾ ಅವರಿಗೆ ಹಸ್ತಾಂತರ ಮಾಡಲಾಯಿತು.
ತಾಪಂ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಚೇಳೈರು ಗ್ರಾಪಂ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಭಟ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಭಗವಾನ್, ಶಿಕ್ಷಕಿ ಶೋಭಾ ಉಪಸ್ಥಿತರಿದ್ದರು.
Kshetra Samachara
01/01/2021 10:37 pm