ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರಿನಲ್ಲಿ ದೇಶದ ಮೊತ್ತ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪನೆ

ಮಂಗಳೂರು: ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಮಂಗಳೂರಿನಲ್ಲಿ ಸ್ಥಾಪಿಸಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ.

ಮಂಗಳೂರಿನಲ್ಲಿ ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪನೆಯಾಗಲಿದ್ದು, ಇದಕ್ಕಾಗಿ ಕರಾವಳಿ ತೀರದ 158 ಎಕರೆ ಕೆಐಎಡಿಬಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಕೇರಳದಲ್ಲಿ ಸ್ಥಾಪನೆಯಾಗ ಬೇಕಿದ್ದ ಅಕಾಡೆಮಿಗೆ ಸಿಆರ್ ಝೆಡ್ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ನಿರ್ಮಲಾ‌ ಸೀತಾರಾಮನ್ ರಕ್ಷಣಾ ಸಚಿವೆಯಾಗಿದ್ದ ಸಂದರ್ಭ ಈ ಯೋಜನೆ ಮಂಗಳೂರಿಗೆ ವರ್ಗಾಯಿಸಿದ್ದರು ಎನ್ನಲಾಗಿದೆ.

ಇನ್ನು ಮಂಗಳೂರಿನಲ್ಲಿ ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪನೆಯಾದರೆ ಕರಾವಳಿಗೆ ಹೆಚ್ಚಿನ ಭದ್ರತೆ ಲಭಿಸಿದಂತಾಗುತ್ತದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

Edited By : Vijay Kumar
Kshetra Samachara

Kshetra Samachara

20/09/2020 01:37 pm

Cinque Terre

4.1 K

Cinque Terre

0

ಸಂಬಂಧಿತ ಸುದ್ದಿ